Monday, November 23, 2026
HomeBelagaviಖಾಸಗಿ ಮಾರುಕಟ್ಟೆಗೆ ಪಾಲಿಕೆಗೆಯಿಂದ ಬಿಗ್ ಶಾಕ್

ಖಾಸಗಿ ಮಾರುಕಟ್ಟೆಗೆ ಪಾಲಿಕೆಗೆಯಿಂದ ಬಿಗ್ ಶಾಕ್

ಬೆಳಗಾವಿ
ಗಾಂಧಿ ನಗರದಲ್ಲಿರುವ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆ ಭೂ ಬದಲಾವಣೆ ಮಾಡಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಕಟ್ಟಡದ ಅನುಮತಿಯನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ರದ್ದುಗೊಳಿಸಿರುವ ಬೆನ್ನಲೆ ಕೆಎಂಸಿ ಕಾಯ್ದೆ ಕಲಂ 443 (4)ರನ್ವಯ ನಿಮ್ಮ ಅನುಮತಿ ರದ್ದುಗೊಳಿಸಬಾರದು ಏಕೆ ಎಂದು ಮಹಾನಗರ ಪಾಲಿಕೆಯಿಂದ ಕಾರಣ ಕೇಳಿ ಜೈ ಕಿಸಾನ್ ಖಾಸಗಿ ಮಾರುಕಟ್ಟೆಗೆ ಏಳು ದಿನಗಳಲ್ಲಿ ಉತ್ತರಿಸವಂತೆ ನೋಟಿಸ್ ನೀಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬೆಳಗಾವಿ ರವರ ದೂರಿನ ಅನ್ವಯ ಸರ್ಕಾರದ ನಿರ್ದೇಶನದಂತೆ, ಭೂ ಉಪಯೋಗ ಬದಲಾವಣೆಯ ಮಾನ್ಯ ಸರ್ಕಾರದ ಆದೇಶ ಸಂಖ್ಯೆನಅಇ/315/ಬೆಮಪ್ರಾ/2014, ದಿನಾಂಕ:11-12-2014 ರ ಷರತ್ತು ಸಂಖ್ಯೆ.07 ಉಲ್ಲಂಘಣೆಯಾಗಿರುವುದರಿಂದ, “ಬೆಳಗಾವಿ ನಗರದ ರಿ.ಸ. ನಂ 677, 678, 679/1, 680/1, 686/1, 686/2, 696, 697/2, 698/1 698/2 5 10 20 20 2 ಜಮೀನನ್ನು ಕೃಷಿ ವಲಯದಿಂದ ವಾಣಿಜ್ಯ (ತರಕಾರಿ ಸಗಟು ಮಾರುಕಟ್ಟೆ) ವಲಯಕ್ಕೆ” ಭೂ ಉಪಯೋಗದ ಆದೇಶ ಸಂಖ್ಯೆ ನಅಇ / 315 / ಬೆಮಪ್ರಾ / 2014 ದಿನಾಂಕ:11-12-2014 ಸ್ವಯಂಚಾಲಿತವಾಗಿ ರದ್ದುಗೊಂಡಿರುವುದನ್ನು ದೃಢೀಕರಿಸಿ, ಉಲ್ಲೇಖ (1) ರನ್ವಯ ಆದೇಶಿಸಲಾಗಿದೆ.
ಉಲ್ಲೇಖ (2) ರನ್ವಯ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬೆಳಗಾವಿ ರವರು ಸದರಿ ಸರ್ವೇ ನಂಬರಗಳಲ್ಲಿ ನಿರ್ಮಿಸಿದ ಎಲ್ಲ ಕಟ್ಟಡಗಳು ಅನಧೀಕೃತ ಕಟ್ಟಡಗಳಾಗಿರುತ್ತವೆ. ಸದರಿ ರಿ.ಸ ನಂಬರಗಳಲ್ಲಿ ಮಹಾನಗರ ಪಾಲಿಕೆಯಿಂದ ನೀಡಿರುವ ಕಟ್ಟಡ ಪರವಾನಿಗೆಗಳನ್ನು ರದ್ದುಪಡಿಸಿ ಆದೇಶಿಸಬೇಕೆಂದು ಆಗ್ರಹಿಸಿರುತ್ತಾರೆ.
ಸದರಿ ಜಮೀನುಗಳು ಮಹಾಯೋಜನೆಯಲ್ಲಿ ವ್ಯವಸಾಯ ಉದ್ದೇಶಕ್ಕಾಗಿ ನಿಗಧಿಪಡಿಸಿದ್ದು, ಸರ್ಕಾರದಿಂದ ವಾಣಿಜ್ಯ ಉದ್ದೇಶಕ್ಕಾಗಿ ಭೂ ಉಪಯೋಗ ಬದಲಾವಣೆ ಮಾಡಲಾಗಿತ್ತು. ಆದರೆ ಉಲ್ಲೇಖ (1) ರನ್ವಯ ಸ್ವಯಂಚಾಲಿತವಾಗಿ ರದ್ದುಗೊಂಡಿರುವುದನ್ನು ದೃಢೀಕರಿಸಿ, ಆದೇಶಿಸಿರುವುದರಿಂದ ಸದರಿ ಬಡಾವಣೆಯ ನಿವೇಶನಗಳಲ್ಲಿ ನೀಡಿರುವ ವಾಣಿಜ್ಯ ಕಟ್ಟಡ ಪರವಾನಿಗೆಗಳು ಹಾಗೂ ಕಟ್ಟಡ ಮುಕ್ತಾಯ ಪ್ರಮಾಣ ಪತ್ರಗಳನ್ನು, ಕೆ.ಎಂ.ಸಿ ಕಾಯ್ದೆ ಕಲಂ 443 (4) ರನ್ವಯ ಏಕೆ ರದ್ದುಪಡಿಸಬಾರದೆಂದು ಈ ನೋಟಿಸು ತಲುಪಿದ 7 ದಿನದೊಳಗಾಗಿ ತಮ್ಮ ಲಿಖಿತ ಹೇಳಿಕೆಯನ್ನು ಈ ಕಛೇರಿಗೆ ಸಲ್ಲಿಸುವಂತೆ ತಪ್ಪಿದಲ್ಲಿ ವಿಷಯದ ಬಗ್ಗೆ ತಮ್ಮ ಹೇಳಿಕೆ ಏನು ಇಲ್ಲವೆಂದು ಪರಿಗಣಿಸಿ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದೆಂದು ನೋಟಿಸ್ ‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

Total Views 1006
RELATED ARTICLES

Most Popular

Recent Comments

KNN City News
Home
E-Paper