
ಬೆಳಗಾವಿ
ಖಾನಾಪುರ ತಾಲೂಕಿನ ಮಾಣಿಕವಾಡಿಯ ಹೋಟೆಲ್ ನಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ವೆಂಕಪ್ಪನ ಕೊಲೆ ಪ್ರಕರಣವನ್ನು ಪೊಲೀಸರು ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದ್ದಾರೆ ಎಂದು ಆಗ್ರಹಿಸಿ ಖಾನಾಪುರ ತಾಲೂಕಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಹೋಟೆಲ್ ಕಳ್ಳತನ ಮಾಡಿದ್ದಾನೆ ಎಂದು ಯುವಕನನ್ನು ಕೊಣೆಯಲ್ಲಿ ಥಳಿಸಿದ ಹಿನ್ನೆಲೆಯಲ್ಲಿ ಯುವಕ ವೆಂಕಪ್ಪ ಮೃತಪಟ್ಟಿದ್ದಾನೆ. ಕಳೆದ ಆ.16 ರಂದು ಖಾನಾಪುರದಲ್ಲಿ ಹೋಟೆಲ್ ನಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಕೊಠಡಿಯಲ್ಲಿ ಕೂಡಿ ಹಾಕಿ ಹೋಟೆಲ್ ಮಾಲೀಕ ಹಾಗೂ ಆತನ ತಮ್ಮ ಮನಸೋ ಇಚ್ಚೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾನೆ. ಆದರೆ ವೆಂಕಪ್ಪನ ಕೊಲೆಗೆ ನ್ಯಾಯ ಕೊಡಿಸುವಲ್ಲಿ ಖಾನಾಪುರ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ವೆಂಕಪ್ಪ ಹೋಟೆಲ್ ನಲ್ಲಿ ಪ್ರಾಮಾಣಿಕವಾಗಿದ್ದ. ಸುಳ್ಳು ಆರೋಪ ಮಾಡಿ ಆತನನ್ನು ಥಳಿಸಿ ಕೊಲೆ ಮಾಡಿದ್ದಾರೆ. ಮನೆಯಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಕುಟುಂಬಕ್ಕೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡಿದ್ದಾರೆ. ಅವರ ಮನೆಯಲ್ಲಿನ ತಂದೆ, ತಾಯಿಗೆ ಹೋಟೆಲ್ ಮಾಲೀಕರು ಬೇದರಿಕೆ ಹಾಕುತ್ತಿದ್ದಾರೆ. ಸರಿಯಾಗಿ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
