
ಬೆಳಗಾವಿ
ಬಸವಣ್ಣ ಲಿಂಗಾಯತ ಧರ್ಮ ಸ್ಥಾಪನೆ ಮಾಡಿಯೇ ಇಲ್ಲ ಕೆಲವೊಂದು ನಾಟಕ ಕಂಪನಿಗಳು ಮಾಡಿಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸ್ಪೋಟಕ ಹೇಳಿಕೆ ನೀಡಿದರು.
ಶನಿವಾರ ಚಿಕ್ಕೋಡಿ ತಾಲೂಕಿನ ಹಾರೂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಬಸವಣ್ಣವನರು ಹಿಂದೂ ಸಮಾಜದಲ್ಲಿರುವ ಮೂಢ ನಂಬಿಕೆಯ ವಿರುದ್ಧ ಹೋರಾಡಿದ್ದಾರೆಯೇ ಹೊರತು ಅವರ ಧರ್ಮ ಸ್ಥಾಪನೆ ಮಾಡಿಯೇ ಇಲ್ಲ ಎಂದರು.
ಕೆಲವೊಂದು ಮುರ್ಖರು ವೀರಶೈವ ಲಿಂಗಾಯತ ಧರ್ಮವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಯಾವಾಗಲೂ ಧರ್ಮ ಎಂದಲ್ಲಿ ಹಿಂದೂ ಅಂಥಾ ಬರೆಸಿ, ಜಾತಿ ಅಂಥಾ ಇದ್ದಲ್ಲಿ ಲಿಂಗಾಯತ ಅಥವಾ ಲಿಂಗಾಯತರೇ ಬರೆಸಿ, ಧರ್ಮ ಎಂದು ಘೋಷಣೆ ಆಗದೆ ಸೇರಿಸಿ ಮುಂದಿನ ಮಕ್ಕಳ ಭವಿಷ್ಯ ಕೊಲೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಎಲ್ಲಿಯವರೆಗೆ ವೀರಶೈವ ಲಿಂಗಾಯತ ಲಿಂಗಾಯತ ಧರ್ಮ ಎಂದು ಕೇಂದ್ರ ಸರಕಾರ ಘೋಷಣೆ ಮಾಡುವುದಿಲ್ಲವೋ ಅಲ್ಲಿಯವರೆಗೂ ವೀರಶೈವ ಲಿಂಗಾಯತ ಎಂದು ಬರೆಸಿದರೆ ಅರ್ಥವಿಲ್ಲ.ನಾಳೆ ಸರಕಾರಿ ಮೀಸಲಾತಿ ಪಡೆಯುವಾಗ ವೀರಶೈವ, ಲಿಂಗಾಯತ ಎನ್ನುವುದೇ ಇಲ್ಲ. ಆರೇ ಧರ್ಮಗಳಿಗೆ ನಮ್ಮ ಸಂವಿಧಾನದಲ್ಲಿ ಅವಕಾಶ ಇದೆ ಎಂದರು.
ಹಿಂದೂ ಎಂದರೆ ಮಾತ್ರ ಮೀಸಲಾತಿ ಸಿಗುತ್ತದೆ. ಲಿಂಗಾಯತ ಎಂದರೆ ಸಿಗುವುದಿಲ್ಲ. ಲಿಂಗಾಯತ ಜಾತಿ ಎಂದು ಪರಿಗಣನೇ ಇಲ್ಲ ಎಂದರು.
ಎಲ್ಲಾ ಸಮಾಜದವರ ಹಿಂದೂ ಧರ್ಮದ ಹಿಂದೆಯೇ ಅವರ ಜಾತಿ ಸೇರಿಸಿದ್ದಾರೆ. ಕೆಲವೊಂದು ಲಿಂಗಾಯತರು 2ಎ ದಲ್ಲಿ ಹೋಗಿದ್ದಾರೆ. ಅದರಲ್ಲಿ ಲಿಂಗಾಯತರು ಅಂದಿಲ್ಲ. ವೀರಶೈವ ಉಪಯೋಗ ಮಾಡಿಲ್ಲ. ಹಿಂದೂ ತಮ್ಮ ಉಪ ಜಾತಿ ಎಂದು ಹೇಳಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಹಿಂದೂಗಳ ಮೇಲೆ ದಬ್ಬಾಳಿಕೆ ಆಗುತ್ತಿದೆ. ಮದ್ದೂರು ಹಿಡಿದು ರಾಜ್ಯದ ಹಿಂದೂಗಳು ಒಂದಾಗಿದ್ದಾರೆ. ಮುಸ್ಲಿಮ್ ಸಮಾಜಕ್ಕೆ ಮೀಸಲಾತಿ ಕೊಟ್ಟರು, ಮುಖ್ಯಮಂತ್ರಿ ಕಚೇರಿಯಲ್ಲಿ ಮುಸ್ಲಿಮ್ ಅಧಿಕಾರಿಗಳಿದ್ದಾರೆ ಸಿದ್ದರಾಮಯ್ಯನವರ ಬಗ್ಗೆಯೇ ಸಂಶಯ ಬರುತ್ತಿದೆ ಎಂದರು.
ಈಗಾಗಲೇ ರಾಜ್ಯ ಸರಕಾರ 400 ಕೋಟಿ ರೂ. ನೀರಲ್ಲಿ ಹಾಕಿದ್ದಾರೆ. ಜಾತಿ ಗಣತಿಯಲ್ಲಿಯೇ ಸರಕಾರ ತನ್ನ ಅವಧಿಯನ್ನು ಮುಗಿಸುವ ಹಾಗೆ ಕಾಣಿಸುತ್ತಿದೆ. ಇವತ್ತು ಯಾವ ಜಾತಿಯೇ ಇಲ್ಲ. ಲಿಂಗಾಯತ, ಕುರುಬ ಕ್ರಿಶ್ಚಿಯನ್ ಎಂದು ಹೇಳುತ್ತಿದೆ ಸರಕಾರ ಎಲ್ಲಿದ್ದಾರೆ ಅವರು ? ಇಂಥ ಸಮುದಾಯದ ಹೆಸರು ಹೇಳಿ ಸಮಸ್ತ ಹಿಂದೂ ಸಮಾಜವನ್ನು ಒಡೆದು ಅಲ್ಪ ಸಂಖ್ಯಾತರ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವ್ಯವಸ್ಥಿತ ಸಂಚು ಕಾಂಗ್ರೆಸ್ ಕೇಂದ್ರ ಮಂಡಳಿಯಿಂದ ನಡೆದಿದೆ. ಅದಕ್ಕೆ ಯಾರೂ ಸೊಪ್ಪು ಹಾಕುವುದಿಲ್ಲ. ಕರ್ನಾಟಕದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.
