Monday, November 23, 2026
HomeBelagaviರಾಜ್ಯ ಸರಕಾರ ಹಿಂದೂಗಳನ್ನು ಒಡೆಯುವ ಹುನ್ನಾರ ನಡೆಸಿದೆ: ಕಡಾಡಿ

ರಾಜ್ಯ ಸರಕಾರ ಹಿಂದೂಗಳನ್ನು ಒಡೆಯುವ ಹುನ್ನಾರ ನಡೆಸಿದೆ: ಕಡಾಡಿ

ಬೆಳಗಾವಿ
ರಾಜ್ಯ ಸರಕಾರ ಆರ್ಥಿಕ, ಸಾಮಾಜಿಕ ಹೆಸರಿನಲ್ಲಿ ಜಾತಿಯ ಸಮೀಕ್ಷೆಯಲ್ಲಿ ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತ್ರ ನಡೆಸಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಆರೋಪಿಸಿರು.
ಭಾನುವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಮ್ಮ ದೇಶದಲ್ಲಿ ಸಂವಿಧಾನ್ಮಾಕವಾಗಿ ಗುರುತಿಸಿರುವುದು ಹಿಂದೂ, ಇಸ್ಲಾಮ್, ಕ್ರೈಸ್ತ,ಪಾರಶಿ, ಶಿಖ, ಜೈನ್ ಸೇರಿದಂತೆ ಏಳು ಧರ್ಮ ಗುರುತಿಸಿದ್ದಾರೆ. ಆದರೆ ಏಳು ಧರ್ಮಗಳನ್ನು ಹೊರತು ಪಡೆಸಿ ಇತರೆ ಎನ್ನುವ ಕಾಲಂ ಸೃಷ್ಠಿಸಿ 11 ಕಾಲಂ ಮಾಡಿ ಜನರನ್ನು ದಿಶಾಬುಲ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಹರಿಹಾಯ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಇಂದು ಹೊಸ ಜಾತಿಗಳ ಸೃಷ್ಟಿ ಮಾಡಿ ಹೊಸ ಜಾತಿಗಳ ಪ್ರವರ್ತಕರಾಗಿ ಬದಲಾಗಿದ್ದಾರೆ. ಕುರುಬ, ಲಿಂಗಾಯತ, ವಾಲ್ಮೀಕಿ ಕ್ರಿಶ್ಚಿಯನ್ ಎಂದು 47 ಜಾತಿಗಳನ್ನು ಸೇರಿಸುವ ಕುತಂತ್ರ ಮಾಡಿದ್ದಾರೆ. ಕರ್ನಾಟಕದಲ್ಲಿ 1350 ಜಾತಿ ಮತ್ತು ಉಪಜಾತಿಗಳಿದ್ದವು. ಈಗ 1561 ಜಾತಿ ಉಪಜಾತಿಗಳನ್ನು ತೋರಿಸುವ ಮೂಲಕ 210 ಹೊಸ ಜಾತಿಗಳನ್ನು ಸೃಷ್ಟಿ ಮಾಡಿದ್ದಾರೆ ಎಂದರು.
ಕ್ರಿಶ್ಚಿಯನ್‌ ಜಾತಿಗೆ ಸೇರಿಸಲು ರಾಜ್ಯ ಸರಕಾರ ಹೊಸದಾಗಿ 47 ಜಾತಿಗಳನ್ನು ಸೃಷ್ಟಿಸಿದ್ದಾರೆ. ಯಾರು ಹೊಸ ಧರ್ಮಕ್ಕೆ ಮತಾಂತರವಾದರೆ ಹಿಂದಿನ ಜಾತಿ ಹೇಳುವ ಅವಶ್ಯಕತೆ ಇರುವುದಿಲ್ಲ. ರಾಜ್ಯದ ಜನ ಗೊಂದಲ್ಲಿದ್ದಾರೆ. ಈ ವಿಷಯವನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಖುರ್ಚಿ ಅಲುಗಾಡುತ್ತಿದೆ. ಆ ಖುರ್ಚಿ ಅಲುಗಾಡುಬಾರದು ಎಂದರೆ ಜಾತಿ ಗಣತಿ, ಬೆಂಗಳೂರಿನ ರಸ್ತೆಗಳು ಕೆಟ್ಟು ಹೋಗಿದ್ದಾವೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಮನೆಗಳು ಹಾಳಾಗಿವೆ. ರೈತರ ಬೆಳೆ ನೆಲಕಚ್ಚಿವೆ ಯಾರ ಸಮಸ್ಯೆಯೂ ಬಗೆ ಹರಿಸದ ಮುಖ್ಯಮಂತ್ರಿ ಈ‌ ರೀತಿಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ಕೇಂದ್ರ ಸರಕಾರ ಎರಡೂ ವರ್ಷಗಳ ಕಾಲ ಜಾತಿಗಣತಿಯನ್ನು ಮಾಡುವುದಾಗಿ ಹೇಳಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಎರಡೂ ವಾರದಲ್ಲಿ ಜಾತಿಗಣತಿ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ನಾಡಿನ ಮಠಾಧೀಶರು ಜಾತಿಗಣತಿ ಮಾಡುವುದು ಬೇಡ ಎಂದಿದ್ದಾರೆ. ಅಲ್ಲದೆ, ಸಚಿವ ಸಂಪುಟದ ಸದಸ್ಯರೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಧರ್ಮಕ್ಕೆ ಕೈ ಹಾಕಿ ಸುಟ್ಟುಕೊಂಡಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಸಿದ್ದರಾಮಯ್ಯನವರೇ ನಿಮಗೇಕೆ ಇಷ್ಟೊಂದ ಆತೂರ ಎಂದು ಪ್ರಶ್ನಿಸಿದರು‌.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ರಸ್ತೆ ಹಾಳಾಗಿದೆ ಎಂದು ಹೊಸ ಹೆಲಿಕಾಪ್ಟರ್ ಖರೀದಿ ಮಾಡಿದ್ದಾರೆ. ರಸ್ತೆಯಲ್ಲಿ ಓಡಾಡಿದರೆ ತೊಂದರೆಯಾಗುತ್ತದೆ ಎಂದು ಖರೀದಿ ಮಾಡಿದ್ದಾರೆ. ಸಾಮಾನ್ಯ ಜನ ಹೇಗೆ ಓಡಾಡಬೇಕು ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಸಂಜಯ ಪಾಟೀಲ್, ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ‌ಕೊಂಗಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Total Views 135
RELATED ARTICLES

Most Popular

Recent Comments

KNN City News
Home
E-Paper