Monday, November 23, 2026
HomeBelagaviಕಲ್ಲು ತೂರಾಟದ ಘಟನಾ ಸ್ಥಳಕ್ಕೆ ಕಮಿಷ್ನರ್ ಬೊರಸೆ ಭೇಟಿ

ಕಲ್ಲು ತೂರಾಟದ ಘಟನಾ ಸ್ಥಳಕ್ಕೆ ಕಮಿಷ್ನರ್ ಬೊರಸೆ ಭೇಟಿ

ಬೆಳಗಾವಿ
ಖಡಕ್ ಗಲ್ಲಿಯಲ್ಲಿ ಕಲ್ಲು ತೂರಾಟದ ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಭೇಟಿ ನೀಡಿ ಶುಕ್ರವಾರ ರಾತ್ರಿ ತಾವೇ ಖುದ್ದು ಪರಿಶೀಲನೆ ನಡಿಸಿದರು.
ಸ್ಥಳೀಯರು, ಪೊಲೀಸರಿಂದ ಮಾಹಿತಿ ಪಡೆದ ಬೊರಸೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಖಡಕ್ ಗಲ್ಲಿಯಲ್ಲಿ ಎರಡು ಕೋಮಿನ ಜನರ ನಡುವೆ ಘರ್ಷಣೆ ನಡೆದಿದೆ. ಇಂದು ಒಂದು ಧಾರ್ಮಿಕ ಕಾರ್ಯಕ್ರಮ ಇತ್ತು‌. ಒಂದು ರೂಟ್ ಫಿಕ್ಸ್ ಇದೆ ಅದನ್ನ ಬಿಟ್ಟು ಬೇರೆ ರೂಟ್ ನಲ್ಲಿ ಬಂದಿದ್ದಾರೆ.ಇದನ್ನು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ ಈ ವೇಳೆ ಘರ್ಷಣೆ ಆಗಿದೆ ಎಂದರು.
ಸ್ಥಳೀಯರು ಕಲ್ಲು ತೂರಾಟ ಆಗಿದೆ ಎಂದು ಕೇಸ್ ಕೊಟ್ಟಿದ್ದಾರೆ. ಯಾರು ತಪ್ಪು ಮಾಡಿದಾರೆ ಅವರ ಮೇಲೆ ಕ್ರಮ ಆಗುತ್ತದೆ. ಯಾರಿಗೂ ಗಾಯ ಆಗಿಲ್ಲ, ಎರಡು ಕೋಮಿನ ಹಿರಿಯರು ಕೂಡಲೇ ಸರಿ ಪಡೆಸಿದ್ದಾರೆ. ಓರಿಜನಲ್ ರೂಟ್ ಬಿಟ್ಟು ಬಂದು ತಪ್ಪಾಗಿದೆ ಎಂದರು.
ಐ ಲವ್ ಬ್ಯಾನರ್ ಹಾಕಿದ ಪ್ರಕರಣ‌. ಮಹಾನಗರ ಪಾಲಿಕೆ ಅವರಿಗೆ ಹೇಳುತ್ತೇವೆ. ಅನುಮತಿ ಪಡೆದು ಬ್ಯಾನರ್ ಹಾಕಲು ಸೂಚನೆ ನೀಡ್ತೇವೆ ಎಂದರು.

 

Total Views 243
RELATED ARTICLES

Most Popular

Recent Comments

KNN City News
Home
E-Paper