
ಬೆಳಗಾವಿ
ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧನೋರ್ವ ನಿತ್ಯ ಆಸ್ಪತ್ರೆಗೆ ಆಗಮಿಸಿ ಮರಳಿ ಮನೆಗೆ ಹೋಗುವಾಗ ರಸ್ತೆಯಲ್ಲಿ ಆಯ ತಪ್ಪಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಕಿಲ್ಲಾ ಕೆರೆ ಕೋಟೆಯ ಮುಂಭಾಗದಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ಮೃತ ವೃದ್ಧನನ್ನು ಕಾಕತಿಯ ಗಣಪತಿ ಪಾಟೀಲ್ ಎಂದು ಗುರುತಿಸಲಾಗಿದೆ. ಇತ ಕೆಲ ತಿಂಗಳುಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲಾಸ್ಪತ್ರೆಯಿಂದ ಕಾಕತಿಗೆ ಚಿಕಿತ್ಸೆಗೆಂದು ಹೋಗಿ ಬರುತ್ತಿದ್ದ ನಿನ್ನೆ ರಸ್ತೆಯಲ್ಲಿ ಆಯತಪ್ಪಿ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
