Thursday, November 19, 2026
HomeBelagaviಹುಕ್ಕೇರಿ ಪವರ್ ಗೆ ಮಹಾವೀರ ಸಾರಥಿ

ಹುಕ್ಕೇರಿ ಪವರ್ ಗೆ ಮಹಾವೀರ ಸಾರಥಿ

ಹುಕ್ಕೇರಿ
ರಾಜ್ಯಾದ್ಯಂತ ಸದ್ದು ಮಾಡಿದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಅಧ್ಯಕ್ಷ- ಉಪಾಧ್ಯಕ್ಷಾಗಿ ಮಹಾವೀರ ನಿಲಜಗಿ ಹಾಗೂ ಅಜೀತ್ ಮುನ್ನೋಳಿ ಬುಧವಾರ ಆಯ್ಕೆಯಾಗಿದ್ದಾರೆ.
.ಚುನಾವಣೆ ಅಧಿಕಾರಿ ಸುಭಾಷ ಸಂಪಗಾವಿ ಅಧಿಕೃತ ಘೋಷಣೆ ಮಾಡಿದರು. ನಂತರ ನೂತನ ಅಧ್ಯಕ್ಷ ಮಹಾವೀರ ನಿಲಜಗಿ ಮತ್ತು ಉಪಾಧ್ಯಕ್ಷ ಅಜೀತ ಮುನ್ನೋಳಿ ಅವರು ಸಂಘದ ಸಂಸ್ಥಾಪಕ ದಿ.ಅಪ್ಪಣಗೌಡರ ಪುತ್ಥಳಿಗೆ ಹಾಗೂ ದಿ. ಉಮೇಶ ಕತ್ತಿ ಅವರ ಭಾವ ಚಿತ್ರಕ್ಕೆ ನಮನ ಸಲ್ಲಿಸಿದರು.
ಕತ್ತಿ ಮತ್ತು ಜಾರಕಿಹೊಳಿ ಕುಟುಂಬಗಳ ನಡುವಿನ ಜಿದ್ದಾಜಿದ್ದಿನ ಕಾಳಗಕ್ಕೆ ಸಾಕ್ಷಿಯಾಗಿದ್ದ, ಈ ಸಂಸ್ಥೆಯ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ, ಶಾಸಕ ನಿಖಿಲ್ ಕತ್ತಿ ಅವರ ನೇತೃತ್ವದ ಸ್ವಾಭಿಮಾನಿ ಪೆನಲ್ 15ಕ್ಕೆ 15 ಸ್ಥಾನಗಳನ್ನು ಕ್ಲೀನ್ ಸ್ವೀಪ್ ಮಾಡುವುದರೊಂದಿಗೆ ಪ್ರಚಂಡ ಜಯಭೇರಿ ಬಾರಿಸಿ ಸಂಸ್ಥೆಯಲ್ಲಿ ಮತ್ತೇ ಅಧಿಕಾರಕ್ಕೆ ಮರಳಿದಾರೆ.

Total Views 55
RELATED ARTICLES

Most Popular

Recent Comments

KNN City News
Home
E-Paper