Thursday, November 19, 2026
HomeBelagaviರೈತರ ಠೇವಣಿಗೆ ಪಂಗನಾಮ ಹಾಕಿದ ಕೆಲ ಸಹಕಾರ ಸಂಘ: ಭಾನುವಾರ ಸಭೆ

ರೈತರ ಠೇವಣಿಗೆ ಪಂಗನಾಮ ಹಾಕಿದ ಕೆಲ ಸಹಕಾರ ಸಂಘ: ಭಾನುವಾರ ಸಭೆ

ಬೆಳಗಾವಿ
ಬೆಳಗಾವಿ ನಗರದ ಗೋವನ್ ಡಿಸ್ಟ್ರಿಕ್ಟ್ ವೆಜಿಟೆಬಲ್ ಪರಿಚಿಸರ್ಸ್ ಕೋ ಆಪ್ ರೇಟಿವ್ ಸೊಸೈಟಿ ಲಿ., ಬೆಳಗಾವಿ ಹೋಲಸೇಲ್ ವೆಜಿಟೆಬಲ್,ಕೋಆಪ್ ಸೊಸೈಟಿ ಲಿ. ಕಾಮತಗಲ್ಲಿ, ಕಪಿಲನಾಥ್ ಕ್ರೆಡಿಟ್ ಸೌಹಾರ್ದ ಸೊಸೈಟಿ ಮಾದವಾ ರಸ್ತೆಲ್ಲಿನ ರಡ್ಮೂರು ಸೊಸೈಟಿ ಮುಚ್ಚಿರುವ ಕಾರಣದಿಂದಾಗಿ, ಸದಸ್ಯರುಗಳ ಠೇವಣಿ ಹಣ, ಉಳಿತಾಯ ಹಣ ಹಾಗೂ ಇತರ ಮೂಲಗಳಲ್ಲಿ ಮಾಡಿದ ಹೂಡಿಕೆಗಳನ್ನು ವಾಪಸು ಪಡೆಯುವ ಕುರಿತು ಚರ್ಚಿಸಲು ಭಾನುವಾರ ಅ.12 ರಂದು ಕನ್ನಡ ಸಾಹಿತ್ಯ ಭವನದಲ್ಲಿ ಠೇವಣಿದಾರರ ಸಭೆ ಆಯೋಜಿಸಲಾಗಿದೆ.

ಸಭೆಯಲ್ಲಿ ಖಾಸಗಿ ಮಾರುಕಟ್ಟೆಯವರು ಕೆಲ ಸಹಕಾರ ಸಂಘಗಳ ಹೆಸರಿನಲ್ಲಿ ಬಡ ರೈತರು ಠೇವಣಿ ಇಟ್ಟ ಹಣವನ್ನು ಲಪಾಟಿಸಿದ್ದು ಉನ್ನತ ಮಟ್ಟದ ತನಿಖೆ ನಡೆಸಲು ಸಾಹಿತ್ಯ ಭವನದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಸಾಹಿತ್ಯ ಭವನದಲ್ಲಿ ಸಭೆ ಕರೆದಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಠೇವಣಿದಾರರು ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

Total Views 99
RELATED ARTICLES

Most Popular

Recent Comments

KNN City News
Home
E-Paper