
ಬೆಳಗಾವಿ
ಬೆಳಗಾವಿಯಲ್ಲಿ ಮುಗ್ಧ ಮರಾಠಿಗರು ಹಾಗೂ ಎಂಇಎಸ್ ವಿರುದ್ಧ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿಕೆ ನೀಡಿದ್ದು, ಅವರನ್ನು ಒಬ್ಬ ಕ್ರಿಮಿ ಎಂದು ಎಂಇಎಸ್ ಮುಖಂಡ ಶುಭಂ ಸೇಳಿಕೆ ಹೇಳಿಕೆ ನೀಡಿದ್ದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿರುವ ಪುಂಡ ಎಂಇಎಸ್ ಸಂಘಟನೆಯ ಮುಖಂಡ ಶುಭಂ ಸೇಳಕೆ, ನಮ್ಮಲ್ಲಿರುವ ಒಗ್ಗಟ್ಟು ಕನ್ನಡ ಸಂಘಟನೆಯಲ್ಲಿಲ್ಲ. ಮರಾಠಿ ಭಾಷಿಕರ ಮೇಲೆ ಗೂಂಡಾಗಿರಿ ನಡೆಸುವ ಕನ್ನಡ ಸಂಘಟನೆಗಳ ಮುಖಂಡರು ಪುಂಡಾಟಿಕೆಯ ಹೇಳಿಕೆ ನೀಡುವುದು ಬಿಡಬೇಕು ಎಂದು ತಿಳಿಸಿದರು. ಈ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ.
