
ಬೆಳಗಾವಿ
ಒಂದೇ ಪಕ್ಷದಲ್ಲಿದ್ದರೂ ಸಹಕಾರ ಕ್ಷೇತ್ರದಲ್ಲಿ ಒಬ್ಬೊರಿಗೊಬ್ಬರು ಸೆಡ್ಡು ಹೊಡೆದು ಸ್ಪರ್ಧೆ ನಡೆಸಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ ಒಬ್ಬರಿಗೊಬ್ಬರು ಸೋಲಿಸಲು ಪಣ ತೊಟ್ಟವರು ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಯ ಮತಗಟ್ಟೆಯಲ್ಲಿ ಭಾನುವಾರ ಮುಖಾಮುಖಿ ಭೇಟಿಯಾದರು.
ರಮೇಶ್ ಕತ್ತಿ ಎಲ್ಲರತ್ತ ಕೈ ಮುಗಿಯುತ್ತಿದ್ದರು ಆಗ ಎದುರಿಗೆ ಬಂದ ಅಣ್ಣಾಸಾಹೇಬ ಜೊಲ್ಲೆ ಕತ್ತಿ ಅವರನ್ನು ನೋಡುತ್ತಿದ್ದಂತೆ ಮತ್ತೇ ಮತಗಟ್ಟೆಗೆ ತೆರಳಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಯಲ್ಲಿ ಮತ ಚಲಾಯಿಸಲು ಆಗಮಿಸಿದ ರಮೇಶ ಕತ್ತಿ ತಮ್ಮ ಒಡೆತನದ ಶಾಲಾ ಬಸ್ಸಿನಲ್ಲಿ ಆಗಮಿಸಿದ ಪಿಕೆಪಿಎಸ್ ಡೆಲಿಗೇಟರ್ಸ ಜೊತೆಗೆ ಬಿ.ಕೆ ಮಾಡೆಲ್ ಸ್ಕೂಲಿಗೆ ಮತ ಚಲಾಯಿಸಲು ಆಗಮಿಸಿದರು.
ಮತ ಚಲಾಯಿಸಲು ಆಗಮಿಸಿದ 51 ಕತ್ತಿ ಬಣದ ಮತದಾರರು ತೀವ್ರ ಕೂತುಹಲಕ್ಕೆ ಕಾರಣವಾಗಿರುವ ಹುಕ್ಕೇರಿ ತಾಲೂಕಿನ ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ಒಟ್ಟು 90 ರಲ್ಲಿ ಒಟ್ಟು 52 ಕತ್ತಿ ಬಣಕ್ಕೆ ಬೆಂಬಲ, ಜಾರಕಿಹೊಳಿ ಬಣಕ್ಕೆ 41 ಡೆಗೇಟರ್ಸ ಬೆಂಬಲ ನೀಡಿದ್ದಾರೆ.
ಮಾಜಿ ಸಂಸದ ರಮೇಶ ಕತ್ತಿ ಹಾಗೂ ಸಂಗಮ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ನಡುವೆ ಹಣಾಹಣಿ ನಡೆದಿದ್ದು ಕ್ರಾಸ್ ವೋಟಿಂಗ್ ಆಗುವ ಭೀತಿಯಲ್ಲಿರುವ ರಮೇಶ ಕತ್ತಿ ಇದ್ದಾರೆ.
ಇನ್ನೂ ಡಿಸಿಸಿ ಬ್ಯಾಂಕ್ ಚುನಾವಣೆಯ ಮತದಾನ ಹಿನ್ನೆಲಯಲ್ಲಿ ನಿಪ್ಪಾಣಿ ತಾಲೂಕಿನ 75 ಮತದಾರರ ಜೊತೆ ಆಗಮಿಸಿದ ಅಣ್ಣಾಸಾಹೇಬ್ ಜೊಲ್ಲೆ ಕೇಸರಿ ಪೇಟವನ್ನ ಧರಿಸಿಕೊಂಡು ಬಂದು ಮತದಾನ ಮಾಡಿದ ವಿಕ್ಟರಿ ಸಿಂಬಾಲ್ ತೋರಿಸಿದರು.
ಮತಗಟ್ಟೆ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ.
