
ಬೆಳಗಾವಿ
ಕಳೆದ 30 ವರ್ಷದಿಂದ ಅಥಣಿ ಸಹಕಾರ ಕ್ಷೇತ್ರದ ಚುನಾವಣೆ ಆಗಿರಲಿಲ್ಲ. ಈಗ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿ ಮತದಾನ ಮಾಡಿದ್ದೇನೆ. ನನ್ನ ಗೆಲುವು ನಿಶ್ಚಿತ ಎಂದು ಮಾಜಿ ಶಾಸಕ ಮಹೇಶ ಕುಮುಠಳ್ಳಿ ಹೇಳಿದರು.
ಭಾನುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅಥಣಿ ಸಹಕಾರ ಮತಕ್ಷೇತ್ರದ ಸಹಕಾರ ಕ್ಷೇತ್ರದ ಡಿಸಿಸಿ ಬ್ಯಾಂಕ್ ನಲ್ಲಿ 2018ರ ಮೊದಲು ಹಾಲಿ ಅಭ್ಯರ್ಥಿ ಲಕ್ಷ್ಮಣ ಸವದಿ ಪಿಕೆಪಿಎಸ್ ಹೆಚ್ಚಿಗೆ ಮಾಡಲು ವಿರೋಧ ಮಾಡಿದ್ದರು. ಜಿಲ್ಲಾ ನಾಯಕರು ಹೊಂದಾಣಿಕೆ ಮಾಡಿ ಈ ಹಿಂದೆ ಕಿರಣ್ ನಾಯಕ ಎಂಬುರನ್ನು ಹಿಂದೆ ಸರಿಸಿದ್ದೇವು ಎಂದರು.
ಅಥಣಿ ಶಾಸಕ ಲಕ್ಷ್ಮಣ ಸವದಿ ರಾಜಕೀಯ ಜಿದ್ದಿಗೆ ಕೆಲ ಪಿಕೆಪಿಎಸ್ ಬಂದ್ ಮಾಡಿಸಿ ರೈತರಿಗೆ ಮೋಸ ಮಾಡಿದ್ದಾರೆ ಎಂದರು.
ರಾಜಕೀಯ ದುರುದ್ದೇಶದಿಂದ ರೈತರಿಗೆ ಅನ್ಯಾಯ ಮಾಡಿದ್ದಾರೆ. ಈಗ ಲಕ್ಷ್ಮಣ ಸವದಿ ಅವರ ಕೈಯಲ್ಲಿ ಅಧಿಕಾರ ಇದೆ. ರಾಜಕಾರಣ ಮಾಡುವುದು ಸರಿಯಲ್ಲ. ರೈತರಿಗೆ ಲಾಭ ಮಾಡುವುದು ಎಲ್ಲರೂ ಶ್ರಮಿಸಬೇಕು. ನಾವು ಸ್ಪರ್ಧೆ ನಡೆಸಿದ್ದು, 30 ವರ್ಷಗಳ ಕಾಲ ಸವದಿ ದಬ್ಬಾಳಿಕೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಅಥಣಿಯಲ್ಲಿ ಹಲವಾರು ಸೊಸೈಟಿಗಳನ್ನು ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವೆ. ಸೋಲು, ಗೆಲುವು ಸಾಮಾನ್ಯ. ಅದಕ್ಕೆ ನಾನು ಹೆಸರುವುದಿಲ್ಲ ಎಂದರು.
ನಾನು ಜಾರಕಿಹೊಳಿ ಪ್ಯಾನಲ್ ಅನ್ನುವುದು ಇಲ್ಲ. ರಾಜಕಾರಣದಲ್ಲಿ ವೈಯಕ್ತಿಕವಾಗಿ ಮಾಡಬೇಡಿ. 30 ವರ್ಷ ದಬ್ಬಾಳಿಕೆ ಮಾಡಿರುವುದನ್ನು ವಿರೋಧಿಸಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಸಾಕಷ್ಟು ಜನ ನನಗೆ ಹೇಳಿದ್ದಾರೆ. ನಾನು ಸ್ಪರ್ಧೆ ಮಾಡಿದ್ದಕ್ಕೆ ಮತದಾರರಿಗೆ ಗೌರವ ಕೊಟ್ಟಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ಚುನಾವಣೆಯ ಸ್ಪರ್ಧೆ ಮಾಡಿರುವ ಶಾಸಕ ಲಕ್ಷ್ಮಣ ಸವದಿ ಸುಪುತ್ರ ಚಿದಾನಂದ ಸವದಿ ಮತದಾರರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ನಾನು ಸೋಲು ಕಂಡರೂ ಪರವಾಗಿಲ್ಲ ಸವದಿ ವಿರುದ್ಧ ಸಮರ ಸಾರುವೆ ಎಂದರು.
