Sunday, November 22, 2026
HomeBelagaviನನ್ನ ಬಳಿ ಡಿಸಿಸಿ ಬ್ಯಾಂಕ್ ಚೋಪಡಿ (ಚೀಟಿ) ಇದೆ: ಸವದಿ

ನನ್ನ ಬಳಿ ಡಿಸಿಸಿ ಬ್ಯಾಂಕ್ ಚೋಪಡಿ (ಚೀಟಿ) ಇದೆ: ಸವದಿ

ಬೆಳಗಾವಿ
ಡಿಸಿಸಿ ಬ್ಯಾಂಕ್‌ ಚುನಾವಣೆ ‌ಪ್ರಾರಂಭಾವಾಗಿದೆ. ಅಥಣಿ ಕ್ಷೇತ್ರದಲ್ಲಿ 125 ಮತಗಳಿದ್ದು, 125 ಮತದಾರರು ಮತದಾನ ಮಾಡಿದ್ದಾರೆ.ಮತದಾರರ ನಾಡಿ ಮಿಡಿತ ನೋಡಿದ್ರೆ ಬಹಳ ದೊಡ್ಡ ಅಂತರದಲ್ಲಿ ನಾನು ಗೆಲುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಭಾನುವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅಥಣಿಯಲ್ಲಿ ಚುನಾವಣೆ ಕಳೆದ ವರ್ಷಗಳಿಂದ ಆಗಿರಲಿಲ್ಲ. ನಾಲ್ಕು ಗಂಟೆಯ ನಂತರ ನಿಮಗೆ ಸಿಹಿ ಸುದ್ದಿ ಕೊಡುತ್ತೆವೆ. ಮೇಲಿಂದ ಮೇಲೆ ನಾವು ರಿನಿವಲ್ ಆಗಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಆಗಬೇಕು ಎಂದರು.
ಗೆದ್ದವರ ಲಿಸ್ಟ್ ನನ್ನ ಬಳಿ ಚೀಟಿ ಮಾಡಿಕೊಂಡಿಟ್ಟಿದ್ದೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬರೆದ ಚೀಟಿ ಮತ್ತು ಫಲಿತಾಂಶ ಟ್ಯಾಲಿ ಆಗಲಿದೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಚುನಾವಣೆ ಆಗಲಿದೆ. ಚುನಾವಣೆ ನೋಡಲಿಕ್ಕೆ ಕಾಣೋದು ಬೇರೆ ಇರೋದು ಬೇರೆ. ಜಾತಿಯ ಮೇಲೆ ರಾಜಕಾರಣ ಆಗುವುದಿಲ್ಲ.
ಎಲ್ಲ ಸಮಾಜವನ್ನು ತೆಗೆದುಕೊಂಡು ಹೋಗಬೇಕು ಎಂದರು.
ಡಿಸಿಸಿ ಬ್ಯಾಂಕ್ ಪವರ್ ಸೆಂಟರ್ ಬದಲಾಗುತ್ತಾ ಎಂಬ ವಿಚಾರಕ್ಕೆ ಉತ್ತರಿಸಿದ ಅವರು, ನನಗೆ ಇದು ಪವರ್ ಸೆಂಟರ್ ಅಲ್ಲವೇ ಅಲ್ಲ. ಚುನಾವಣೆ ಪೂರ್ವದಲ್ಲಿ ನಾವು ಗೆಲ್ತೇವಿ ಅಂತ ಹೇಳಬೇಕಾಗುತ್ತದೆ. ಜನರಲ್ಲಿ ಉತ್ಸಾಹ ತುಂಬಬೇಕು ಎನ್ನುವ ನಿಟ್ಟಿನಲ್ಲಿ ಹೇಳಬೇಕು. ನಾನು ರಾಜು ಕಾಗೆ ಹಿಂದೆ ಈಗ ಮುಂದೆಯೂ ಜೊತೆಗೆ ಇರುತ್ತೇವೆ. ನಿರ್ದೇಶಕರೆಲ್ಲರೂ ಸಹ ನನ್ನ ಸ್ನೇಹಿತರು. ನಾಲ್ಕು ಗಂಟೆಯ ನಂತರ ಎನಾಗುತ್ತೆ ಎನ್ನುವುದನ್ನು ನೀವು ನೋಡಲಿದ್ದಿರಿ ಎಂದರು.

Total Views 104
RELATED ARTICLES

Most Popular

Recent Comments

KNN City News
Home
E-Paper