Monday, November 23, 2026
HomeBelagaviಹೊಸ ಬಾಂಬ್ ಸಿಡಿಸಿದ ಜೊಲ್ಲೆ: ಏನಾಗುತ್ತೆ ಇಲ್ಲಿನ ಫಲಿತಾಂಶ

ಹೊಸ ಬಾಂಬ್ ಸಿಡಿಸಿದ ಜೊಲ್ಲೆ: ಏನಾಗುತ್ತೆ ಇಲ್ಲಿನ ಫಲಿತಾಂಶ

ಬೆಳಗಾವಿ
ನಿಪ್ಪಾಣಿ ಸಹಕಾರ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ 75 ಜನ ಸ್ವತಃ ಬಂದು ವೋಟ್ ಮಾಡಿದ್ದಾರೆ. ಗೆಲುವು ನಿಶ್ಚಿತ ಇದೆ ಮತ ಎಣಿಕೆ ಆದ ಮೇಲೆ ಗೊತ್ತಾಗುತ್ತೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.
ಭಾನುವಾರ ಬೆಳಗಾವಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜಕಾರಣದಲ್ಲಿ ಟಾರ್ಗೆಟ್ ಮಾಡೋರು ಇರೋದೆ. ಜಾರಕಿಹೊಳಿ‌ ಜೊತೆಗೆ ಸಂಬಂಧ ಕೆಡಿಸಲು ಏನೇನೂ ಮಾತಾಡಿದ್ದಾರೆ. ನಮಗೂ ರಾಜಕಾರಣ ಗೊತ್ತಿದೆ ನಾವೇ ಗೆಲ್ಲುತ್ತೇವೆ ಎಂದರು.
ಏಳು ಚುನಾವಣೆಯಲ್ಲಿ ನಿಪ್ಪಾಣಿ, ಬೈಲಹೊಂಗಲ, ಕಿತ್ತೂರು, ಹುಕ್ಕೇರಿ ರಿಸಲ್ಟ್ ಬರುವುದಿಲ್ಲ. ಅಧಿಕೃತವಾಗಿ ಘೋಷಣೆ ಆಗುವುದಿಲ್ಲ. ಒಂದೊಂದು ವೋಟ್ ವಿಚಾರಕ್ಕೆ ಕೋರ್ಟ್‌ ನಲ್ಲಿ ಪ್ರಕರಣ ಇದೆ. ಕೋರ್ಟ್ ನಿಂದ ಆದೇಶವಾಗುವವರೆಗೂ ಅಧಿಕೃತವಾಗಿ ರಿಸಲ್ಟ್ ಘೋಷಣೆ ಆಗಲ್ಲ. ಆದ್ರೇ ಮತ ಎಣಿಕೆ ನಡೆಯುತ್ತೆ ಯಾರು ಗೆಲ್ಲತ್ತಾರೆ ಅನ್ನೋದು ಗೊತ್ತಾಗುತ್ತೆ ಎಂದರು.

Total Views 193
RELATED ARTICLES

Most Popular

Recent Comments

KNN City News
Home
E-Paper