
ಬೆಳಗಾವಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಸ್ಕಾರ ಇಲ್ಲ. ಅವರ ಮನೆಯಲ್ಲಿ ಅವರಿಗೆ ಸಂಸ್ಕಾರ ಕೊಟ್ಟಿಲ್ಲ. ಅವರ ತಂದೆ ತಾಯಿ ಇವರಿಗೆ ಸಂಸ್ಕಾರ ಕಲಸಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ವಾಗ್ದಾಳಿ ನಡೆಸಿದರು.
ಗುರುವಾರ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರನೇ ವಯಸ್ಸಿನಲ್ಲಿ ರಮೇಶ್ ಜಾರಕಿಹೊಳಿ ಕಳ್ಳು ಬಟ್ಟಿ ಕಾಯಿಸುಕ್ಕೆ ಕಳಸಿದ್ದಾರೆ.ಅವನು ಒಬ್ಬ ಕೀಳು ಮಟ್ಟದ ರಾಜಕಾರಣಿ. ನಮ್ಮ ಕುಟುಂಬದ ಬಗ್ಗೆ ಹಗುರವಾಗಿ ಮಾತನ್ನಾಡಿದ್ದಾರೆ. ನಮ್ಮ ತಂದೆ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ ಎಂದು ಏಕವಚನದಲ್ಲಿಯೇ ಹರಿಹಾಯ್ದರು.
ಡಿಸಿಸಿ ಬ್ಯಾಂಕ್ ಕೃಷ್ಣಾ ಸಹಕಾರಿ ಸಂಘದ ಬಗ್ಗೆ ಅಪಮಾನ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಕಡೆ ತೀರುಗಿ ಉಚ್ಚೆ ಹೊಯ್ದುದಿಲ್ಲ ಎನ್ನುತ್ತಾನೆ. ಘಟಪ್ರಭಾ ಸಕ್ಕರೆ ಕಾರ್ಖಾನೆ ಯಾರಿಂದ ನಷ್ಟ ಉಂಟಾಗಿದೆ? ಗೋಕಾಕ ಮೀಲ್ ಯಾರು ಬಂದ ಮಾಡಿದ್ದಾರೆ ? ಬಂದ್ ಮಾಡಿದ್ದರಿಂದ ಎಂಟು ಸಾವಿರ ಮಂದಿ ಬೀದಿಪಾಲು ಯಾರಿಂದ ಆದರು? ಡಿಸಿಸಿ ಬ್ಯಾಂಕ್ನಿಂದ ನೂರಾರು ಕೋಟಿ ರೂಪಾಯಿ ಲೋನ್ ತೆಗೆದುಕೊಂಡುವರು ಯಾರು? ಡಿಸಿಸಿ ಬ್ಯಾಂಕ್ ಕಡೆ ಮುಖ ಮಾಡಿ ಉಚ್ಚೆ ಹೊಯ್ದುದಿಲ್ಲ ಎನ್ನುತ್ತಾನೆ. ಡಿಸಿಸಿ ಬ್ಯಾಂಕ್ ಸಂಸ್ಥಾಪಕ ಮುರಗೋಡ ಮಹಾಂತ ಅಜ್ಜಾವರಿಗೆ ಅಪಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಮೇಶ್ ಜಾರಕಿಹೊಳಿ ಆಡಿದ ಮಾತಿಗೆ ನಾವು ಖಂಡನೆ ವ್ಯಕ್ತಪಡಿಸುತ್ತೆನೆ. ರಮೇಶ್ ಜಾರಕಿಹೊಳಿ ಏನಾದರೂ ಸವದಿ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದರೆ, ನಂದು ಬಿಸಿ ರಕ್ತ ನಾನು ರಮೇಶ್ ಜಾರಕಿಹೊಳಿ ವಿರುದ್ಧ ಎಲ್ಲಾ ಪದ ಬಳಕೆ ಮಾಡಲಾಗುವುದು ರಮೇಶ್ ನನ್ನ ಮಾತು ಕೇಳಿದರೆ ದಿನನಿತ್ಯ ಎಂಟು ಹತ್ತು ಬಿಪಿ ಟ್ಯಾಬ್ಲೆಟ್ ತೆಗೆದುಕೊಳ್ಳಬೇಕಾಗುತ್ತದೆ. ನಾನು ಮುಂದೆ ಆ ರೀತಿಯಲ್ಲಿ ಪದ ಬಳಕೆ ಮಾಡುತ್ತೇನೆ ಎಂದು ಜಾರಕಿಹೊಳಿಗೆ ಎಚ್ಚರಿಕೆ ನೀಡಿದರು.
2023ರ ಚುನಾವಣೆ, ಹುಕ್ಕೇರಿ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವನಿಗೆ ಜನರು ತಕ್ಕ ಉತ್ತರ ನೀಡಿದ್ದಾರೆ. ಇನ್ನು ಮುಂದೆ ರಮೇಶ್ ಜಾರಕಿಹೊಳಿ ಅಥಣಿಗೆ ಬರಬೇಕು ಎಂದರೆ ಎಚ್ಚರದಿಂದ ಮುಂಚಿಕೊಂಡು ಬರಬೇಕು , ಮುಂಚಿಕೊಂಡು ಹೊಗಬೇಕು. ತನ್ನ ಬಗಲು ಬಚ್ಚಾಗಳ ಜೊತೆ ಬಿಟ್ಟಿ ಉಪ್ಪಿಟ್ಟು ಚಹಾ ಸೇವನೆ ಮಾಡಿ ಹೋಗಬೇಕು. ನಮ್ಮ ತಂದೆ ನಮ್ಮ ಕಾರ್ಯಕರ್ತರ ಬಗ್ಗೆ ಮಾತನಾಡಿದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಚ್ಚರಿಕೆ ನೀಡಿದರು.
