Thursday, November 19, 2026
HomeBelagaviಲಂಚಬಾಕ ಎಕ್ಸಿಕ್ಯೂಟಿವ್ ಎಂಜಿನೀಯರ್ ಬಂಧನ

ಲಂಚಬಾಕ ಎಕ್ಸಿಕ್ಯೂಟಿವ್ ಎಂಜಿನೀಯರ್ ಬಂಧನ

ಬೆಳಗಾವಿ
ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಕು ಲಂಚಕ್ಕೆ ಕೈಯೊಡ್ಡಿದ್ದ ಅಧಿಕಾರಿಯನ್ನು ಬಂಧಿಸಲಾಗಿದೆ.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನೀಯರ್ ಅಶೋಕ ಶಿರೂರ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಯಭಾಗ ತಾಲೂಕು ಖೇಮಲಾಪುರದ ಯಾಸಿನ್ ಫೆಂಡಾರಿ ಅವರ ಭೂಸ್ವಾಧೀನದ ಪರಿಹಾರದ ಹಣ 18ಲಕ್ಷ ಬಿಡುಗಡೆ ಮಾಡಲು 1ಲಕ್ಷ ಲಂಚ ಪಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅ. 17ರಂದು ಭ್ರಷ್ಟಾಚಾರ ಕಾಯ್ದೆ 7(a) ಅಡಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ನಿರಂಜನ ಪಾಟೀಲ ಸೋಮವಾರ ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ. ಇನ್ಸಪೆಕ್ಟರ್ ಗೋವಿಂದಗೌಡ ಪಾಟೀಲ, ಸಿಬ್ಬಂಧಿ ರವಿ ಮಾವರಕರ, ಮಲ್ಲಿಕಾರ್ಜುನ ಥೈಕಾರ್ ಉಪಸ್ಥಿತರಿದ್ದರು.

Total Views 51
RELATED ARTICLES

Most Popular

Recent Comments

KNN City News
Home
E-Paper