Monday, November 23, 2026
HomeBelagaviಮಹಾರಾಷ್ಟ್ರ ಪುಂಡರಿಗೆ ಬಿಸಿ ಮುಟ್ಟಿಸಿದ ಜಿಲ್ಲಾ ಪೊಲೀಸ್ ಇಲಾಖೆ

ಮಹಾರಾಷ್ಟ್ರ ಪುಂಡರಿಗೆ ಬಿಸಿ ಮುಟ್ಟಿಸಿದ ಜಿಲ್ಲಾ ಪೊಲೀಸ್ ಇಲಾಖೆ

ಬೆಳಗಾವಿ

ಗಡಿಯಲ್ಲಿ ರಾಜ್ಯೋತ್ಸವದ ವಿರುದ್ಧ ಎಂಇಎಸ್ ಆಚರಿಸುವ ಕರಾಳ‌ ದಿನಾಚರಣೆಗೆ ಆಗಮಿಸುತ್ತಿದ್ದ ಕೊಲ್ಲಾಪುರ ಸಂಸದ ದೈರ್ಯಶೀಲ ಮಾನೆ ಹಾಗೂ ಶಿವಸೇನೆ ಮುಖಂಡ ವಿಜಯ ದೇವಣೆಯವನ್ನು ಶನಿವಾರ ನಿಪ್ಪಾಣಿ ತಾಲೂಕಿನ ಕೋಗನೊಳಿ ಚೆಕ್ ಪೋಸ್ಟ್ ನಲ್ಲಿ ಬೆಳಗಾವಿ ಪೊಲೀಸರು ತಡೆದಿದ್ದಾರೆ.
ಬೆಳಗಾವಿಯ ಗಡಿ ಪ್ರವೇಶದ ಮಾಡುವುದ್ದಾಗಿ ಪುಂಡಾಟ ನಡೆಸಿದ್ದ ಮಹಾರಾಷ್ಟ್ರದ ನಾಯಕರಿಗೆ ಜಿಲ್ಲಾ ಪೊಲೀಸರು ಖಡಕ ಎಚ್ಚರಿಕೆ ನೀಡಿ ಮರಳಿ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲ್ಲಾಪುರ ಹಾತಕಣಗಲಾ ಸಂಸದ ಧೈರ್ಯಶೀಲ ಮಾನೆ, ಕೊಲ್ಲಾಪುರ ಶಿವಸೇನೆ ಅಧ್ಯಕ್ಷ ವಿಜಯ ದೇವಣೆ ಡ್ರಾಮಾ ಕೆಲ‌ ಕಾಲ‌ ಕೋನೊಳಿ ಚೆಕ್ ಪೋಸ್ಟ್ ನಲ್ಲಿ ಬೆಳಗಾವಿಗೆ ಪ್ರವೇಶ ನಿಷೇಧ ಇದೆ ಎಂದು ತಿಳಿದಿದ್ದರೂ‌ ಪುಂಡಾಟ ಮಾಡಿ ಕೂಗಾಡಿ ಕೂಗಾಡಿ ಮರಳಿ ಗೂಡು ಸೇರಿದರು.

Total Views 162
RELATED ARTICLES

Most Popular

Recent Comments

KNN City News
Home
E-Paper