Monday, November 23, 2026
HomeBelagaviಕೃಷ್ಣಮೃಗಳ ಸಾವು: ಸಾಂಕ್ರಾಮಿಕ ರೋಗದ ಭೀತಿ

ಕೃಷ್ಣಮೃಗಳ ಸಾವು: ಸಾಂಕ್ರಾಮಿಕ ರೋಗದ ಭೀತಿ

ಬೆಳಗಾವಿ
ಬೆಳಗಾವಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಳ ಸಾವು ಪ್ರಕರಣಕ್ಕೆ ಸಾಂಕ್ರಾಮಿಕ ರೋಗ ಹರಡುವ ಭೀತಿ ವ್ಯಕ್ತಪಡಿಸಿದ ಅರಣ್ಯ ಇಲಾಖೆ ಮೃಗಾಲಯದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ಹೊರಡಿಸಿದೆ.
ಬೆಳಗಾವಿ ತಾಲೂಕಿನ ಭೂರತರಾಮನಹಟ್ಟಿ ಗ್ರಾಮದಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 38 ಪೈಕಿಯಲ್ಲಿ ಗಳಲೆ ರೋಗದಿಂದ 31 ಕೃಷ್ಣ ಮೃಗಗಳ ಸಾವಿನ ಶಂಕೆ ಇದೆ. ಮೃಗಾಲಯದ ಸುತ್ತಲಿನ ಗ್ರಾಮದಲ್ಲೂ ಗಳಲೆ ರೋಗ ಹರಡುವ ಸಾಧ್ಯತೆ ಇದ್ದು, ಪಶುಪಾಲನೆ ಇಲಾಖೆ ಉಪ ನಿರ್ದೇಶಕರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಪತ್ರ ಬರೆಯಲಾಗಿದೆ.
ಸಸ್ಯ ಆಹಾರದ ಪ್ರಾಣಿಗಳಿಗೂ ಗಳಲೆ ರೋಗ ಹರಡುವ ಸಾಧ್ಯತೆ ಇದೆ. ಸಸ್ಯ ಆಹಾರ ಪ್ರಾಣಿಗಳನ್ನ ಸಾಕಿರುವವರು ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದು, ಗಳಲೆ ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲು ಪಶು ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ರಾಣಿ ಚನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಪ್ರಕರಣದ ತನಿಖೆ ಮಂಗಳವಾರ ಹೊರ ಬರಲಿದೆ ಮೃತ ಕೃಷ್ಣ ಮೃಗಗಳ ಮರಣೋತ್ತರ ಪರೀಕ್ಷೆ ಮಧ್ಯಾಹ್ನದ ವೇಳೆಗೆ ಆಗಮಿಸಲಿದ್ದ ಕೃಷ್ಣಮೃಗಗಳ ಸಾವಿಗೆ ನಿಖರ ಕಾರಣವನ್ನು ತಿಳಿಸಲಿದ್ದಾರೆ.
ಅರಣ್ಯ ಇಲಾಖೆಗೂ ಇಂದು ವರದಿ ರವಾನಿಸಲಿರುವ ವೈದ್ಯರ ತಂಡ 31 ಕೃಷ್ಣಮೃಗಗಳ ಸಾವು, 7 ಕೃಷ್ಣಮೃಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಏಳು ಕೃಷ್ಣ ಮೃಗಗಳ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದ್ದು ಚಿಕಿತ್ಸೆ ಮುಂದುವರೆದಿದೆ.
ಮಂಗಳವಾರವೂ ಮತ್ತೆ ಬೆಂಗಳೂರಿನಿಂದ ವೈದ್ಯರ ತಂಡ ಆಗಮಿಸಲಿದೆ. ಈಗಾಗಲೇ ಮೃಗಾಲಯಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಔಷಧಿ ಸಿಂಪಡಣೆ ಮಾಡಿದ್ದಾರೆ.

Total Views 94
RELATED ARTICLES

Most Popular

Recent Comments

KNN City News
Home
E-Paper