
ಬೆಳಗಾವಿ
ಮನೆಯಲ್ಲಿ ಹೊಗೆ ತುಂಬಿ ಉಸಿರುಗಟ್ಟಿ ಮೂವರು ಯುವಕರು ಮೃತಪಟ್ಟಿದ್ದು ಓರ್ವ ಯುವಕ ಗಂಭೀರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಅಮನಗರದಲ್ಲಿ ಮಂಗಳವಾರ ನಡೆದಿದೆ.
ರೀಹಾನ ಮತ್ತೆ ( 22 ), ಸರಫರಾಜ ಹರಪ್ಪನಹಳ್ಳಿ (22), ಮೋಯಿನ್ ನಲಬಂದ (23 ) ಮೃತಪಟ್ಟ ಯುವಕರು. ಶಾನವಾಜ್ (19 ) ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
