Monday, November 23, 2026
HomeBelagaviಕೃಷ್ಣಮೃಗಗಳ ದಾರುಣ ಸಾವಿಗೆ HS ಬ್ಯಾಕ್ಟೀರಿಯಾ ವೈರಸ್ ದೃಢ

ಕೃಷ್ಣಮೃಗಗಳ ದಾರುಣ ಸಾವಿಗೆ HS ಬ್ಯಾಕ್ಟೀರಿಯಾ ವೈರಸ್ ದೃಢ

ಬೆಳಗಾವಿ
ಬೆಳಗಾವಿ ತಾಲೂಕಿನ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31ಕೃಷ್ಣ ಮೃಗಗಳ ದಾರಣು ಸಾವಿಗೆ ಎಚ್ ಎಸ್ (HS ) ಬ್ಯಾಕ್ಟೀರಿಯಾ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿವೆ. ಬೇರೆ ಪ್ರಾಣಿಗಳಿಗೂ ಹಬ್ಬವು ಮುನ್ನ ತುರ್ತು ಪ್ರೋಟೋಕಾಲ್ ಜರುಗಿಸುವಂತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವೈರಾಣು ತಜ್ಞ ಡಾ. ಚಂದ್ರಶೇಖರ ಮಾಹಿತಿ ನೀಡಿದ್ದಾರೆ.
ರಾಣಿ ಚನ್ನಮ್ಮ ಕಿರು ಮೃಗಾಲದ 31 ಕೃಷ್ಣ ಮೃಗಗಳ ಸಾವಿಗೆ(ಗಳಲೆ) ಹಿಮೋರೆಜಿಕ್ ಸೆಪ್ಟಿಸೆಮೀಯಾ ಕಾರಣ ಅನೋದು ದೃಢವಾಗಿದೆ. ಆದ್ದರಿಂದ 31 ಕೃಷ್ಣ ಮೃಗಗಳ ಮೃತಪಟ್ಟಿವೆ. ಕೃಷ್ಣ ಮೃಗಗಳು ಮೃತಪಟ್ಟ ಹಿನ್ನೆಲೆಯಲ್ಲಿ ಬನ್ನೇರುಘಟ್ಟ,ಬೆಂಗಳೂರಿನ ತಜ್ಞ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿದರು. ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನದ ವೈರಾಣು ತಜ್ಞ ಡಾ.ಚಂದ್ರಶೇಖರರಿಂದ ಮೃಗಾಲಯದ ಅಧಿಕಾರಿಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಕೃಷ್ಣ ಮೃಗಗಳು ಎಚ್.ಎಸ್. (HS) ಬ್ಯಾಕ್ಟೀರಿಯಾದಿಂದ ಸಾವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಕೃಷ್ಣ ಮೃಗಗಳ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕೃಷ್ಣ ಮೃಗಗಳ ಸಾವಿಗೆ HS ಬ್ಯಾಕ್ಟೀರಿಯಾ ಕಾರಣ ಎಂದು ಉಲ್ಲೇಖ ಮಾಡಲಾಗಿದೆ‌. ಮತ್ತೊಂದೆಡೆ ಹಠಾತ್ ತಾಪಮಾನ ಕುಸಿತ, ಒತ್ತಡದಿಂದಲೂ ಕೃಷ್ಣ ಮೃಗಗಳ ಮರಣಕ್ಕೆ ಕಾರಣ ಅಂತಲೂ ಮಾಹಿತಿ ತಿಳಿದು ಬಂದಿದೆ.
ಉಳಿದ ಕೃಷ್ಣ ಮೃಗಗಳ ಆರೋಗ್ಯದಲ್ಲೂ ಚೇತರಿಕೆ ಕಂಡಿದ್ದು,
ಬದುಕುಳಿದ ಏಳು ಕೃಷ್ಣ ಮೃಗಗಳ ತೀವ್ರ ನಿಗಾದಲ್ಲಿ ಚಿಕಿತ್ಸೆ ಮುಂದುವರೆದಿದೆ. ಈಗಾಗಲೇ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದ್ದು ಮೃಗಾಲಯದಲ್ಲಿರೋ ಹುಲಿ,ಸಿಂಹ,ಚಿರತೆ, ಕತ್ತೆಕಿರುಬಗಳು,ಕರಡಿಗಳು ವಿವಿಧ ಜಿಂಕೆ ಪ್ರಬೇಧಗಳಿವೆ. ತುರ್ತು ಪ್ರೋಟೋಕಾಲ್ ಜಾರಿಗೊಳಿಸುವಂತೆ ಸಲಹೆ ನೀಡಿರುವ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

Total Views 69
RELATED ARTICLES

Most Popular

Recent Comments

KNN City News
Home
E-Paper