Monday, November 23, 2026
HomeBelagaviಸರಕಾರದ ಗುದ್ದಾಟದಲ್ಲಿ ಜನ ಕಂಗಾಲಾಗಿದ್ದಾರೆ: ಚಲವಾದಿ ನಾರಾಯಣಸ್ವಾಮಿ ಕಿಡಿ

ಸರಕಾರದ ಗುದ್ದಾಟದಲ್ಲಿ ಜನ ಕಂಗಾಲಾಗಿದ್ದಾರೆ: ಚಲವಾದಿ ನಾರಾಯಣಸ್ವಾಮಿ ಕಿಡಿ

ಬೆಳಗಾವಿ

ಇನ್ನೆನ್ನು ಕಾಂಗ್ರೆಸ್ ನವರು ಬ್ರೇಕ್ ಫಾಸ್ಟ್ ಮಾಡಿದ್ದು, ಮಾಡಿದ್ದೆ, ಹಿಂದಿನಿಂದ ಮಾಡುದು ಮಾಡಿದೆ. ನನ್ನ ಚೇರ ಭದ್ರವಾಗಿದೆ ಎಂದು ಹೇಳುತ್ತಾರೆ. ಸರಕಾರದಲ್ಲಿ ಗುಂಪುಗಾರಿಕೆ ನಿಂತಿಲ್ಲ ಎಂದು
ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಸರಕಾರದ ಗುಂಪುಗಾರಿಕೆಯಿಂದ ಜನರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಯಾವುದೇ ಉತ್ತರ ಸಿಗುತ್ತಿಲ್ಲ. ಬಿಜೆಪಿಯವರು ಎಷ್ಟು ಬಡೆದುಕೊಂಡರೂ ಸರಕಾರಕ್ಕೆ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ 3 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಆ ಹುದ್ದೆಗಳ ಭರ್ತಿ ಮಾಡಲು ಸರಕಾರಕ್ಕೆ ಮನಸ್ಸಿಲ್ಲ. ಮಾತು ಮಾತ್ರ ಬಾರಿ ಮಾತನಾಡುತ್ತಾರೆ. ಆಡಿದ ಮಾತು ಒಂದು ಇಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಸರಕಾರ ಕೆಟ್ಟ ರೀತಿ ನಡೆದುಕೊಳ್ಳುತ್ತಿದೆ. ಇವರ ಕಾದಾಟ ಜನರಿಗೆ,ನಮಗೆ ಬೇಕಾಗಿಲ್ಲ. ಸರಕಾರದ ಗುದ್ದಾಟದಲ್ಲಿ ಜನರು ಕಂಗಾಲ್ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಅನೇಕ ಸಮಸ್ಯೆಗಳಿಗೆ. ಒಳ ಮೀಸಲಾತಿ ಹೆಸರಿನಲ್ಲಿ ಹುದ್ದೆಗಳನ್ನು ಭರ್ತಿ ಮಾಡದೆ ಸರಕಾರ ಪರಿತಪಿಸುತ್ತಿದೆ ಎಂದು ಹರಿಹಾಯ್ದರು.

Total Views 21
RELATED ARTICLES

Most Popular

Recent Comments

KNN City News
Home
E-Paper