
ಬೆಳಗಾವಿ
ಸಂಚಾರ ನಿಯಮ ಉಲ್ಲಂಘಿಸಿದ್ದ ಅಪ್ರಾಪ್ತ ಬಾಲಕ ಟ್ರಕ್ ಚಾಲನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ಬೆಳಗಾವಿ ಮೂರನೇ ಜೆಎನ್ಎಂಸಿ ನ್ಯಾಯಾಲಯ 25 ಸಾವಿರ ದಂಡ ವಿಧಿಸಿದೆ.
ಇತ್ತೀಚೆಗೆ ಟಿಳಕವಾಡಿ ಪ್ರದೇಶಲ್ಲಿ ಟ್ರಕ್ ಚಾಲನೆ ಮಾಡುತ್ತಿದ್ದನ್ನು ಗಮನಿಸಿದ ಸಂಚಾರ ಪೊಲೀಸ್ ಬಡಿಗೇರ ಟ್ರಕ್ ಸೀಜ್ ಮಾಡಿ ಕೇಸ್ ದಾಖಲಿಸಿದ್ದರು. ಟ್ರಕ್ ಅನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಇಂದು ನ್ಯಾಯಾಲಯ ಅಪ್ರಾಪ್ತನಿಗೆ ಟ್ರಕ್ ಚಾಲನೆ ಮಾಡಿದ್ದಕ್ಕೆ 25 ಸಾವಿರ ದಂಡ ವಿಧಿಸಿ ಟ್ರಕ್ ಬಿಡುಗಡೆಗೊಳಿಸಿದರು. ಬೆಳಗಾವಿ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
