
ಬೆಳಗಾವಿ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಯುವಕನಿಗೆ ನಗರದ ಪೊಕ್ಸೋ ನ್ಯಾಯಾಲಯ 30 ವರ್ಷಗಳ ಕಠಿಣ ಕಾರಾಗ್ರಹ ಶಿಕ್ಷೆ ಇಂದು ಪ್ರಕಟಿಸಿದೆ.
2024ರಲ್ಲಿ ನಗರದ ಮಾರುಕಟ್ಟೆ ಠಾಣೆಯಲ್ಲಿ ದಾಖಲಾಗಿದ್ದ ಪೊಕ್ಸೋ ಪ್ರಕರಣದಲ್ಲಿ ತ್ವರಿತ ತನಿಖೆ ನಡೆಸಿ ಪೊಲೀಸರು ದೋಷಾರೋಪ ಸಲ್ಲಿಸಲಾಗಿತ್ತು.
ಕೃಷ್ಣಾ ಮಲ್ಲೇಶಿ ಗಾಡಿವಡ್ಡರ(೨೦) ಎಂಬಾತ 14 ವರ್ಷದ ಬಾಲಕಿಯನ್ನು ಪುಸಲಾಯಿಸಿ ನೆರೆಯ ಗೋವಾಕ್ಕೆ ಕರೆದೊಯ್ದು ಕೊಠಡಿಯಲ್ಲಿ ಅತ್ಯಾಚಾರವೆಸಗಿದ್ದ.
ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 30 ವರ್ಷ ಕಠಿಣ ಶಿಕ್ಷೆ ಜೊತೆಗೆ 1ಲಕ್ಷ ದಂಡ ನ್ಯಾಯಾಲಯ ಇಂದು ವಿಧಿಸಿದೆ. ನೊಂದ ಬಾಲಕಿಗೆ ಸರಕಾರದಿಂದ 4ಲಕ್ಷ ಪರಿಹಾರ ಧನ ಪರಿಹಾರ ಸಿಗಲಿದೆ.
ಅಂದಿನ ಮಾರ್ಕೆಟ್ ಠಾಣೆ ಇನ್ಸಪೆಕ್ಟರ್ ಮಾಹಾಂತೇಷ ದಾಮನ್ನವರ ತನಿಖೆ ನಡೆಸಿ ದೋಷಾರೋಪ ಸಲ್ಲಿಸಿದ್ದರು.
