Monday, November 23, 2026
HomeBelagaviಹಿಂಡಲಗಾ ಕಾರಾಗೃಹಕ್ಕೆ ಡಿಜಿಪಿ ಅಲೋಕಕುಮಾರ್ ದಿಢೀರ್ ಭೇಟಿ

ಹಿಂಡಲಗಾ ಕಾರಾಗೃಹಕ್ಕೆ ಡಿಜಿಪಿ ಅಲೋಕಕುಮಾರ್ ದಿಢೀರ್ ಭೇಟಿ

ಬೆಳಗಾವಿ
ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಅಲೋಕಕುಮಾರ್ ಮಂಗಳವಾರ ದಿಢೀರ್ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳ ಸಮಗ್ರ ಪರಿಶೀಲನೆ ನಡೆಸಿದರು.
ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಅವರು ಜೈಲಿನ ಒಳಭಾಗ ಮತ್ತು ಹೊರಭಾಗದ ಭದ್ರತಾ ವ್ಯವಸ್ಥೆ, ಕೈದಿಗಳ ಮೇಲ್ವಿಚಾರಣೆ, ಸಿಬ್ಬಂದಿಗಳ ಕಾರ್ಯಪದ್ಧತಿ ಕುರಿತು ಮಾಹಿತಿ ಪಡೆದರು. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆದರೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.
ಜೈಲಿನೊಳಗೆ 5ಜಿ ಜಾಮರ್ ವ್ಯವಸ್ಥೆ ಇದ್ದರೂ ನೆಟ್ವರ್ಕ್ ಸಿಗುತ್ತಿರುವ ಬಗ್ಗೆ ಹಾಗೂ ಅಪರಿಚಿತರಿಂದ ಮೊಬೈಲ್ ಫೋನ್, ಮಾದಕ ವಸ್ತುಗಳ ಎಸೆತ ನಡೆಯುತ್ತಿರುವ ಆರೋಪಗಳ ಕುರಿತು ಗಂಭೀರ ಚರ್ಚೆ ನಡೆಯಿತು. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜೈಲಿನ ಭದ್ರತೆಯಲ್ಲಿ ಯಾವುದೇ ಸಡಿಲಿಕೆ ಸಹಿಸಲಾರದು ಎಂದು ಹೇಳಿದ ಡಿಜಿಪಿ, ನಿಗಾವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ನಿರ್ದೇಶನ ನೀಡಿದರು.
ಸಭೆಯಲ್ಲಿ ಬಂಧಿಖಾನೆ ಇಲಾಖೆ ಉತ್ತರ ವಲಯದ ಐಜಿಪಿ ಟಿ.ಪಿ. ಶೇಷಾ, ಐಜಿಪಿ ಚೇತನ್ ಸಿಂಗ್ ರಾಥೋಡ್, ಕಮಿಷನರ್ ಭೂಷಣ್ ಬೋರಸೆ, ಎಸ್ಪಿ ಕೆ. ರಾಮರಾಜನ್ ಹಾಗೂ ಜೈಲು ಅಧೀಕ್ಷಕ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Total Views 118
RELATED ARTICLES

Most Popular

Recent Comments

KNN City News
Home
E-Paper