Monday, November 23, 2026
HomeBelagaviಸೈಬರ್ ವಂಚನೆ: ಎರಡು ಪ್ರತ್ಯೇಕ ಪ್ರಕರಣದಲ್ಲಿ 75 ಲಕ್ಷ ಪಂಗನಾಮ

ಸೈಬರ್ ವಂಚನೆ: ಎರಡು ಪ್ರತ್ಯೇಕ ಪ್ರಕರಣದಲ್ಲಿ 75 ಲಕ್ಷ ಪಂಗನಾಮ

 

ಬೆಳಗಾವಿ
ಆನ್‌ಲೈನ್‌ ಗೇಮ್‌ ಹಾಗೂ ಐಷಾರಾಮಿ ಕಾರು ಖರೀದಿ ಹೆಸರಿನಲ್ಲಿ ನಡೆದ ಎರಡು ಪ್ರಕರಣಗಳಲ್ಲಿ 75 ಲಕ್ಷ ವಂಚಿಸಿದ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿವೆ.
ಇಲ್ಲಿನ ಗಣೇಶಪುರ ಸರಸ್ವತಿ ನಗರದ ನಿವಾಸಿ ದೀಪಕ್‌ ಆನಂದ ಪಾಟೀಲ ಅವರು ಆನ್‌ಲೈನ್ ಗೇಮಿಂಗ್ ಆಮಿಷಕ್ಕೆ ಒಳಗಾಗಿ 40.03 ಲಕ್ಷ ಹಣ ಕಳೆದುಕೊಂಡಿದ್ದಾರೆ.
2023ರ ನವೆಂಬರ್ 21ರಂದು ಫೇಸ್‌ಬುಕ್ ಜಾಹೀರಾತು ಮೂಲಕ ಆನ್‌ಲೈನ್‌ ಆಟದ ಲಿಂಕ್‌ ಬಳಸಿ ಲಾಗಿನ್ ಆಗಿದ್ದರು. ಆರಂಭದಲ್ಲಿ ಸ್ವಲ್ಪ ಹಣ ಸಂದಾಯವಾಗಿತ್ತು. ಎರಡು ವರ್ಷಗಳಲ್ಲಿ ಹಂತ ಹಂತವಾಗಿ ಲಕ್ಷಾಂತರ ಹಣ ಹೂಡಿಕೆ ಮಾಡಿದರು. ಆ ಬಳಿಕ ಯಾರೂ ಸಂಪರ್ಕಕ್ಕೆ ಬರದ ಕಾರಣಕ್ಕೆ ಇದು ನಕಲಿ ಗೇಮಿಂಗ್ ಆ್ಯಪ್ ಎಂಬುದು ತಿಳಿದು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರು ಖರೀದಿಯಲ್ಲಿ ಮೋಸ: ನಗರದ ಖ್ಯಾತ ವೈದ್ಯ ಡಾ.ಗಿರೀಶ ಸೋನವಾಲ್ಕರ ಅವರು ಫೇಸ್‌ಬುಕ್‌ ಜಾಹೀರಾತಿನಲ್ಲಿ ಬಂದ ಮಾಹಿತಿ ಆಧರಿಸಿ, ಐಶಾರಾಮಿ ಕಾರೊಂದನ್ನು ಕೆಲ ತಿಂಗಳ ಹಿಂದೆ ಖರೀದಿಸಿದ್ದರು.
ಹರಿಯಾಣದ ಗುರುಗ್ರಾಮ್‌ನ ಅಸೀಮ್‌ ಪುಪನೇಜಾ ಎನ್ನುವವರು ಮೊಬೈಲ್‌ ಸಂಪರ್ಕ ಸಂಖ್ಯೆ ನೀಡಿದ್ದರು. 50 ಸಾವಿರ ಮುಂಗಡ ಹಾಕಿ, ಬಳಿಕ 35 ಲಕ್ಷ ಕೊಟ್ಟು ಕಾರು ಖರೀದಿಸಿದ್ದರು. ಹೆಚ್ಚುವರಿಯಾಗಿ 40 ಸಾವಿರವನ್ನೂ ಆರೋಪಿ ಪಡೆದಿದ್ದರು.
ಕಾರು ಡಾ.ಗಿರೀಶ ಅವರ ಹೆಸರಿಗೆ ವರ್ಗಾವಣೆಯಾಗಿದೆ. ಆದರೆ, ಅದನ್ನು ನೀಡಿದ ವ್ಯಕ್ತಿ ನಿಜವಾದ ಕಾರಿನ ಮಾಲೀಕರಲ್ಲ ಎಂಬುದು ನಂತರ ಗೊತ್ತಾಗಿದೆ. ದೂರು ನೀಡಿದ ಡಾ.ಗಿರೀಶ ಅವರು ‘ಇದು ದೀರ್ಘ ಕಾಲ ನೀರಿನಲ್ಲಿ ಮುಳುಗಿದ್ದ ‘ಟೋಟಲ್‌ ಲಾಸ್‌’ ದರ್ಜೆಯ ವಾಹನವಾಗಿದೆ. ಅನಗತ್ಯ ಹೆಚ್ಚುವ ಹಣ ಪಡೆಯಲಾಗಿದೆ’ ಎಂದು ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ತನಿಖಾ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Total Views 45
RELATED ARTICLES

Most Popular

Recent Comments

KNN City News
Home
E-Paper