Monday, November 23, 2026
HomeBelagaviಸಿಟಿಸ್ 2.0 ಯೋಜನೆಯ ವಿಳಂಬವಾಗಿರುವ ಕುರಿತು ಪ್ರಶ್ನಿಸುವ ಹಕ್ಕು ನನಗೆ ಇದೆ: ಟೋಪಣ್ಣವರ

ಸಿಟಿಸ್ 2.0 ಯೋಜನೆಯ ವಿಳಂಬವಾಗಿರುವ ಕುರಿತು ಪ್ರಶ್ನಿಸುವ ಹಕ್ಕು ನನಗೆ ಇದೆ: ಟೋಪಣ್ಣವರ

 

ಬೆಳಗಾವಿ
ಸಿಟಿಸ್ 2.0 ಯಾವುದೇ ಖಾಸಗಿ ಯೋಜನೆ ಅಲ್ಲ. ಇದು ಜನರ ತೆರಿಗೆ ಹಣದಿಂದ ನಡೆಯುವ ಸಾರ್ವಜನಿಕ ಯೋಜನೆ. ಹೀಗಾಗಿ ಇದರ ಬಗ್ಗೆ ಮಾಹಿತಿ ಕೇಳುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ನಾನು ಒಬ್ಬ ನಾಗರಿಕನಾಗಿ ಹಾಗೂ ತೆರಿಗೆ ಪಾವತಿದಾರನಾಗಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಬಗ್ಗೆ ಪ್ರಶ್ನೆ ಮಾಡಿದ್ದೇನೆ. ಜವಾಬ್ದಾರಿಯುತ ಬೆಳಗಾವಿ ನಗರದ ನಿವಾಸಿಯಾಗಿ ಕೇಂದ್ರ ಸರಕಾರದ ಸಿಟಿಸ್ 2.0 ಯೋಜನೆಯ ವಿಳಂಬದ ಕುರಿತು ಪ್ರಶ್ನೆ ಮಾಡಿದ್ದೇನೆ ಎಂದು ರಾಜಕುಮಾರ ಟೋಪಣ್ಣವರ ಹೇಳಿದ್ದಾರೆ.
ಇಲಾಖೆಯ ಗೌಪ್ಯ ದಾಖಲೆ ನನಗೆ ಯಾರಿಂದಲೂ ನೀಡಲಾಗಿಲ್ಲ. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ.
ಈ ವಿಷಯದಲ್ಲಿ ಮಾಹಿತಿ ಯಾರಿಂದ ಸಿಕ್ಕಿತು ಎಂಬುದಲ್ಲ. ಜನಪ್ರತಿನಿಧಿಗಳಿಗೆ ಸರಿಯಾದ ಸಮಯದಲ್ಲಿ ಮಾಹಿತಿ ಏಕೆ ನೀಡಲಿಲ್ಲ ಎಂಬುದಾಗಿದೆ.
ಯೋಜನೆ ವಿಳಂಬವಾಗುವ ಹಂತಕ್ಕೆ ಬಂದ ನಂತರ ಮಾತ್ರ ಕಾರ್ಯಾಗಾರ ಏಕೆ ಆಯೋಜಿಸಲಾಯಿತು ಎಂಬುದನ್ನು ಪಾಲಿಕೆ ಸ್ಪಷ್ಟಪಡಿಸಬೇಕು. 20% ಅನುದಾನ ನೀಡುವ ನಿರ್ಣಯ ಕೈಗೊಳ್ಳುವ ಮೊದಲು ಪಾಲಿಕೆ ಸದಸ್ಯರಿಗೆ ಸಂಪೂರ್ಣ ಮಾಹಿತಿ ನೀಡಬೇಕಾಗಿರಲಿಲ್ಲವೇ, ಇದು ವ್ಯಕ್ತಿಗಳ ವಿರುದ್ಧದ ಆರೋಪವಲ್ಲ. ಇದು ಆಡಳಿತದ ಪಾರದರ್ಶಕತೆ ಮತ್ತು ಜವಾಬ್ದಾರಿತನದ ಪ್ರಶ್ನೆಯಾಗಿದೆ ಎಂದಿದ್ದಾರೆ.
ಜನರಿಗೆ ಪಾರದರ್ಶಕತೆ ಬೇಕು ಪಾಲಿಕೆ ಸದಸ್ಯರಿಗೆ ಸಮಯೋಚಿತ ಮಾಹಿತಿ ಬೇಕು.ಬೆಳಗಾವಿಗೆ ಸ್ಪಷ್ಟ ಉತ್ತರ ಮತ್ತು ಜವಾಬ್ದಾರಿ ಬೇಕು.ಈ ಪ್ರಶ್ನೆಗಳು ಯಾರಿಗಾದರೂ ಅಸೌಕರ್ಯ ಉಂಟುಮಾಡುತ್ತಿದ್ದರೆ, ಅದೇ ಈ ಪ್ರಶ್ನೆಗಳ ಅಗತ್ಯತೆಯನ್ನು ತೋರಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views 78
RELATED ARTICLES

Most Popular

Recent Comments

KNN City News
Home
E-Paper