Monday, November 23, 2026
HomeBelagaviಹನಿ ಟ್ರ್ಯಾಪ್ ಪ್ರಕರಣ: ದೀಪಾಗೆ ಜಾಮೀನು

ಹನಿ ಟ್ರ್ಯಾಪ್ ಪ್ರಕರಣ: ದೀಪಾಗೆ ಜಾಮೀನು

ಬೆಳಗಾವಿ
ನಗರದಲ್ಲಿನ ಲಾಡ್ಜ್‌ ಕಳವು, ವಂಚನೆ, ಹನಿ ಟ್ರ್ಯಾಪ್ ಪ್ರಕರಣದಲ್ಲಿ ಬಂಧಿತಳಾಗಿದ್ದ ಫ್ಯಾಷನ್ ಡಿಸೈನರ್ ದೀಪಾ ಅವಟಗಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಲಾಗಿದೆ.
ನಗರದ ಟಿಳಕವಾಡಿ ಠಾಣೆ ಪೊಲೀಸರು ಹನಿಟ್ರ್ಯಾಪ್ ಪ್ರಕರಣದ ಪ್ರಮುಖ ಆರೋಪಿ, ದೀಪಾಳಿಗೆ ಸಾಥ್ ನೀಡುತ್ತಿದ್ದ ಶಿವಾನಂದ ಮಠಪತಿ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದಾರೆ. ಅಲ್ಲದೆ, ನಗರ ಪ್ರದೇಶದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಲಾಡ್ಜ್‌ನಲ್ಲಿನ ಕಳವು ಪ್ರಕರಣ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ವ್ಯವಸ್ಥಿತ ತಂಡ ಕಾರ್ಯಾಚರಣೆಗೆ ಭಾಗಿಯಾಗಿರುವ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Total Views 63
RELATED ARTICLES

Most Popular

Recent Comments

KNN City News
Home
E-Paper