Thursday, November 19, 2026
HomeHubli-Dharwadಹುಬ್ಬಳ್ಳಿಯಲ್ಲಿ ಅಲ್ಟ್ರಾವೈಲೆಟ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕೇಂದ್ರ ಉದ್ಘಾಟನೆ

ಹುಬ್ಬಳ್ಳಿಯಲ್ಲಿ ಅಲ್ಟ್ರಾವೈಲೆಟ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕೇಂದ್ರ ಉದ್ಘಾಟನೆ

ಹುಬ್ಬಳ್ಳಿ. ದೇಶದ ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಯಾದ ‘ಅಲ್ಟ್ರಾವೈಲೆಟ್ ಆಟೋಮೋಟಿವ್’ ನಗರದ ಬೈರಿದೇವರಕೊಪ್ಪದ ಪಿ.ಬಿ. ರಸ್ತೆಯಲ್ಲಿ ತನ್ನ ನೂತನ ‘UV ಸ್ಪೇಸ್ ಸ್ಟೇಷನ್’ ಎಕ್ಸ್‌ಪೀರಿಯನ್ಸ್ ಸೆಂಟರ್ ಅನ್ನು ಇಂದು ರಿಬ್ಬನ್ ಕತ್ತರಿಸುವ ಮೂಲಕಉದ್ಘಾಟಿಸಿತು.
ಸ್ಥಳೀಯ ಡೀಲರ್ ಎಂ/ಎಸ್ ರೇವಾಂಕರ್ ಮೋಟಾರ್ಸ್ ಸಹಭಾಗಿತ್ವದಲ್ಲಿ ಆರಂಭವಾಗಿರುವ ಈ ಕೇಂದ್ರವು ‘3S’ (ಮಾರಾಟ, ಸೇವೆ ಮತ್ತು ಬಿಡಿಭಾಗಗಳು) ಸೌಲಭ್ಯವನ್ನು ಒಳಗೊಂಡಿದೆ. ಇಲ್ಲಿ ಇತ್ತೀಚೆಗೆ ಬಿಡುಗಡೆಯಾದ X-47 ಕ್ರಾಸೋವರ್ ಮತ್ತು F77 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಗ್ರಾಹಕರಿಗೆ ಲಭ್ಯವಿವೆ. ಈ ಬೈಕ್‌ಗಳು ಕೇವಲ 2.8 ಸೆಕೆಂಡುಗಳಲ್ಲಿ 60 ಕಿ.ಮೀ ವೇಗ ಪಡೆಯುವ ಸಾಮರ್ಥ್ಯ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 323 ಕಿ.ಮೀ ವರೆಗೆ ಚಲಿಸಬಲ್ಲವು.
 ನೂತನ ಶೋ ರೂಮನ್ನ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಿಇಒ ನಾರಾಯಣ್ ಸುಬ್ರಮಣಿಯಂ, “ಉತ್ತರ ಕರ್ನಾಟಕದ ಆರ್ಥಿಕ ಕೇಂದ್ರವಾದ ಹುಬ್ಬಳ್ಳಿಯಲ್ಲಿ ನಮ್ಮ ಉಪಸ್ಥಿತಿಯನ್ನು ವಿಸ್ತರಿಸುವುದು ಆಯಕಟ್ಟಿನ ಹೆಜ್ಜೆಯಾಗಿದೆ. ತಂತ್ರಜ್ಞಾನ ಪ್ರಿಯ ಗ್ರಾಹಕರಿಗೆ ವಿಶ್ವದರ್ಜೆಯ ಎಲೆಕ್ಟ್ರಿಕ್ ಸಾರಿಗೆ ಅನುಭವ ನೀಡುವುದು ನಮ್ಮ ಗುರಿ,” ಎಂದರು.
ವಿಶೇಷವೆಂದರೆ, ಕಂಪನಿಯು ‘ಬ್ಯಾಟರಿ ಫ್ಲೆಕ್ಸ್’ (BaaS) ಎಂಬ ಹೊಸ ಮಾದರಿಯನ್ನು ಪರಿಚಯಿಸಿದ್ದು, ಇದರ ಅಡಿಯಲ್ಲಿ ಗ್ರಾಹಕರು X-47 ಬೈಕನ್ನು ಕೇವಲ ₹1,49,000 ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಬ್ಯಾಟರಿಗಾಗಿ ತಿಂಗಳಿಗೆ ₹2,499 ರಂತೆ ಚಂದಾದಾರಿಕೆ ಪಾವತಿಸುವ ಸೌಲಭ್ಯವಿದ್ದು, ಇದು ಇವಿ ಖರೀದಿಯನ್ನು ಮತ್ತಷ್ಟು ಸುಲಭಗೊಳಿಸಲಿದೆ. ಈ ಕೇಂದ್ರದಲ್ಲಿ ಟೆಸ್ಟ್ ರೈಡ್ ಮತ್ತು ಸುಧಾರಿತ ರೇಡಾರ್ ತಂತ್ರಜ್ಞಾನದ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು ಈ ಸಮಯದಲ್ಲಿ ಸಂಸ್ಥೆಯ ಪ್ರಮುಖರು ಸೇರಿದಂತೆ ನೂರಾರು ಗ್ರಾಹಕರು ಉಪಸ್ಥಿತರಿದ್ದರು.
Total Views 31
RELATED ARTICLES

Most Popular

Recent Comments

KNN City News
Home
E-Paper