
ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ.
ನೇಕಾರ ಸಮುದಾಯದ ಪ್ರೀತಿ ಕಾಮಕರ ಮೇಯರ್ ಆಗಿ, ಲಿಂಗಾಯತ ಸಮುದಾಯದ ಹನುಮಂತ ಕೊಂಗಾಲಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಜಾತಿ ಲೆಕ್ಕಾಚಾರಗಳ ನಡುವೆಯೂ ಇಬ್ಬರು ಅಪಟ್ಟ ಕನ್ನಡಿಗರಿಗೆ ಗದ್ದುಗೆ ಒಲಿದಿರುವುದು ವಿಶೇಷವಾಗಿದೆ.
ಪ್ರಾದೇಶಿಕ ಆಯುಕ್ತೆ ಜಾನಕಿ ಅವರ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅವಿರೋಧ ಆಯ್ಕೆಯ ನಿರೀಕ್ಷೆ ಇಟ್ಟುಕೊಂಡಿದ್ದರೂ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸ್ಪರ್ಧೆ ನೀಡಿತು.
ಕೈ ಎತ್ತುವ ಮೂಲಕ ನಡೆದ ಮತದಾನದಲ್ಲಿ ಮೇಯರ್ ಸ್ಥಾನಕ್ಕೆ ಪ್ರೀತಿ ಕಾಮಕರ ಪರವಾಗಿ 39 ಮತಗಳು ಚಲಾಯಿತವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಖುರ್ಷಿದಾ ಮುಲ್ಲಾ ಅವರಿಗೆ 20 ಮತಗಳು ಲಭಿಸಿವೆ.
ಉಪ ಮೇಯರ್ ಸ್ಥಾನಕ್ಕೆ ಹನುಮಂತ ಕೊಂಗಾಲಿ ಪರವಾಗಿ 39 ಮತಗಳು ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೋದಿನಸಾಬ್ ಮತ್ತೇವಾಲೆ ಅವರಿಗೆ 20 ಮತಗಳು ಲಭಿಸಿವೆ.
ಚುನಾವಣೆಯಲ್ಲಿ ಬಿಜೆಪಿ ಶಾಸಕ ಮಾತ್ರ ಭಾಗವಹಿಸಿದ್ದು, ಉಳಿದ ಸಂಸದರು, ಶಾಸಕರು ಹಾಗೂ ಎಂಎಲಸಿಗಳು ಗೈರಾಗಿದ್ದರು.
ಒಟ್ಟಾರೆ, ಅವಿರೋಧ ಆಯ್ಕೆಗೆ ಕಾಂಗ್ರೆಸ್ ಅಡ್ಡಿಯಾದರೂ ಬಿಜೆಪಿ ತನ್ನ ಬಹುಮತವನ್ನು ಪ್ರದರ್ಶಿಸಿ ಎರಡೂ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.
