Monday, November 23, 2026
HomeBelagaviಅಕ್ರಮ ಪ್ರಾಪರ್ಟಿಗೆ ಸಹಾಯ ಮಾಡಿದವರು ಯಾರು ?

ಅಕ್ರಮ ಪ್ರಾಪರ್ಟಿಗೆ ಸಹಾಯ ಮಾಡಿದವರು ಯಾರು ?

ಬೆಳಗಾವಿ ನಗರದಲ್ಲಿ ಅಕ್ರಮ ಪ್ರಾರ್ಪಟಿಗೆ ಪಿಐಡಿ ನೀಡಿದ ಪಾಲಿಕೆಯ ಅಧಿಕಾರಿಗಳಿಗೆ ನೋಟಿಸ್ ನೀಡಿರುವ ವಿಚಾರ ಪಾಲಿಕೆಯ ಸಭೆಯಲ್ಲಿ ಜೋರಾಗಿ ಚರ್ಚೆ ನಡೆದು. ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದರ ಜೊತೆಗೆ ಅವರಿಗೆ ಒತ್ತಡ ಹಾಕಿದವರ ಮೇಲೂ ಮುಲ್ಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ಪಾಲಿಕೆ ಸದಸ್ಯರು ಪಟ್ಟು ಹಿಡಿದರು.
ಗುರುವಾರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಪ್ರೀತಿ ಕಾಮಕಾರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಪಾಲಿಕೆ ಕಂದಾಯ ಉಪ ಆಯುಕ್ತ ಸಿದ್ದು ಹುಲ್ಲೋಳ್ಳಿ ಮಾತನಾಡಿ ಪಾಲಿಕೆಯ ಅಧಿಕಾರಿಗಳಾದ ಧರ್ಮನಾಥ ಪೂರಿ, ಪರಶುರಾಮ ಮೇತ್ರಿ, ಲಕ್ಷ್ಮೀ ಪ್ರೀಯಾ, ಪ್ರಕಾಶ ಸೇಠ್ ಸನದಿ ಅವರಿಗೆ ಅಕ್ರಮ ಜಾಗವನ್ನು ಪಿಐಡಿ ಮಾಡಿದ್ದಾರೆ ಎನ್ನುವ ಆರೋಪ‌ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸದಸ್ಯ ಶಂಕರ ಪಾಟೀಲ್ ಮಾತನಾಡಿ, ಪಾಲಿಕೆಯ ಸದಸ್ಯರ ಪಿಐಡಿ ಮಾಡಲು ಯಡತಾಕಿಸುವ ಪಾಲಿಕೆ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿದು ಪಿಐಡಿ ಮಾಡಿಕೊಟ್ಟಿದ್ದಾರೆ. ಕೇವಲ ತಪ್ಪು ಮಾಡಿದ ಅಧಿಕಾರಿಗಳಿಗೆ ನೋಟಿಸ್ ನೀಡುವ ಬದಲು ನಕಲಿ ದಾಖಲೆ ಸಲ್ಲಿಸಿ ಪಿಐಡಿ ಮಾಡಿಸಿಕೊಂಡ ಮಾಲೀಕರ ಮೇಲೆ ಎಫ್ಐಆರ್ ದಾಖಲಿಸಬೇಕು ಎಂದರು.
ಉಪಮೇಯರ್ ಹನುಮಂತ ಕೊಂಗಾಲಿ, ಪಾಲಿಕೆ ಸದಸ್ಯರಾದ ರವಿ‌ ದೋತ್ರೆ, ದಿನೇಶ್ ನಾಶಿಪುಡಿ ತನಿಖೆಗೆ ಒತ್ತಾಯಿಸಿದರು.

 

Total Views 67
RELATED ARTICLES

Most Popular

Recent Comments

KNN City News
Home
E-Paper