Monday, November 23, 2026
HomeBelagaviಎಪಿಕೆ ಫೈಲ್ ನಿಂದ ಮಹಿಳೆಗೆ 2.17 ಲಕ್ಷ ಕನ್ನ ಹಾಕಿದ ಸೈಬರ್ ಖದೀಮರು

ಎಪಿಕೆ ಫೈಲ್ ನಿಂದ ಮಹಿಳೆಗೆ 2.17 ಲಕ್ಷ ಕನ್ನ ಹಾಕಿದ ಸೈಬರ್ ಖದೀಮರು

ಬೆಳಗಾವಿ
ಬೈಲಹೊಂಗಲ ತಾಲೂಕಿನಲ್ಲಿ ಸೈಬರ್ ವಂಚನೆಯೊಂದು ಬೆಳಕಿಗೆ ಬಂದಿದ್ದು, ಮದುವೆ ಆಮಂತ್ರಣದ ಹೆಸರಿನಲ್ಲಿ ಬಂದ ಎಪಿಕೆ (APK) ಫೈಲ್ ಮೂಲಕ ಖಾತೆಯಿಂದ ಲಕ್ಷಾಂತರ ರೂಪಾಯಿ ದೋಚಿದ ಘಟನೆ ನಡೆದಿದೆ.
ತಾಲೂಕಿನ ಬೆಳವಡಿ ಗ್ರಾಮದ ಶಾಂತವ್ವ ಮರಿಗೌಡರ ಖಾತೆಯಿಂದ 2,17,705 ರೂ. ಹಣವನ್ನು ಸೈಬರ್ ಕಳ್ಳರು ವಂಚನೆ ಮೂಲಕ ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 2ರಂದು ಶಾಂತವ್ವ ಅವರ ವಾಟ್ಸಾಪ್‌ಗೆ ಅಪರಿಚಿತರಿಂದ ಮದುವೆ ಆಮಂತ್ರಣದ ಪಿಡಿಎಫ್ ಫೈಲ್ ರೀತಿಯಲ್ಲಿ ಎಪಿಕೆ ಫೈಲ್ ಕಳುಹಿಸಲಾಗಿತ್ತು. ಅದನ್ನು ನಂಬಿ ಕ್ಲಿಕ್ ಮಾಡಿದ ತಕ್ಷಣ ಮೊಬೈಲ್ ಹ್ಯಾಕ್ ಆಗಿ, ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಅಪರಿಚಿತರಿಂದ ಬರುವ APK ಫೈಲ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ, ಇಂತಹ ಲಿಂಕ್‌ಗಳ ಬಗ್ಗೆ ಜಾಗರೂಕತೆ ವಹಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Total Views 111
RELATED ARTICLES

Most Popular

Recent Comments

KNN City News
Home
E-Paper