Monday, November 23, 2026
HomeBelagaviಲಕ್ಷ್ಮಣ ಸವದಿ ಬಿಜೆಪಿಗೆ ಬಂದರೆ ಯಾವುದೇ ಕಾರಣಕ್ಕೂ ಕರೆದುಕೊಳ್ಳುವುದಿಲ್ಲ: ರಮೇಶ್

ಲಕ್ಷ್ಮಣ ಸವದಿ ಬಿಜೆಪಿಗೆ ಬಂದರೆ ಯಾವುದೇ ಕಾರಣಕ್ಕೂ ಕರೆದುಕೊಳ್ಳುವುದಿಲ್ಲ: ರಮೇಶ್

ಅಥಣಿ
ಅಥಣಿಯ ಹಾಲಿ ಶಾಸಕ ಲಕ್ಷ್ಮಣ ಸವದಿ ಮತ್ತೇ ಬಿಜೆಪಿಗೆ ಬರುವ ಸೃಷ್ಟಿ ಮಾಡುತ್ತಾರೆ. ಅವರು ಬರತ್ತಾರೋ, ಬಿಡ್ತಾರೋ ಬೇರೆ ವಿಷಯ. ಅವರು ಬರುವುದಿಲ್ಲ, ನಾವು ತೋಗೊದಿಲ್ಲ ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹರಿಹಾಯ್ದರು.
ಮಂಗಳವಾರ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹಾಲಿ ಶಾಸಕ ಬಿಜೆಪಿ ಬಿಟ್ಟು‌ ಹೋಗುವಾಗ ಏನೆಲ್ಲಾ ಮಾತನಾಡಿದ್ದಾರೆ ಎಂದು ಎಲ್ ಇಡಿ ಟಿವಿಯಲ್ಲಿ ಸ್ಕ್ರೀನ್ ಹಚ್ಚಿ ತೋರಿಸುತ್ತೇವೆ‌. ನಮ್ಮ ನಾಯಕರಿಗೆ ಏನೆಲ್ಲಾ ಮಾತನಾಡಿದ್ದಾರೆ ಎಂದು ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಇಷ್ಟೇ ಹೇಳುತ್ತೇನೆ‌ ಯಾವುದೇ ಕಾರಣಕ್ಕೂ ಸವದಿಯನ್ನು ಬಿಜೆಪಿಗೆ ತೆಗೆದುಕೊಳ್ಳುವುದಿಲ್ಲ ಎಂದರು.
ಲಕ್ಷ್ಮಣ ಸವದಿ ಬಿಜೆಪಿಗೆ ಬರುತ್ತಾರೆ ಎಂದು ಬೀದಿಯಲ್ಲಿ ಜನ ಹೇಳುತ್ತಿದ್ದಾರೆ. ನಾನು ಹೇಳಿಲ್ಲ. ಕಳೆದ 2004 ರಿಂದ ಶಾಸಕರಾಗಿ ಎಲ್ಲ ಚುನಾವಣೆಯಲ್ಲಿ ಜಾತಿ ಆಧಾರಿತ ಕಾರ್ಯಕ್ರಮ ಮಾಡಿಕೊಂಡು ಬಂದರು. ಅದು ಅವರ ತಂತ್ರ ಅದನ್ನು ನಾನು ತಪ್ಪು ಎನ್ನುವುದಿಲ್ಲ. ಈ ಬಾರಿ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಬಿಜೆಪಿ ಗೆಲ್ಲಿಸೋಣ ಎಂದರು.
ಸವದಿ ಬಿಜೆಪಿಗೆ ಬರತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಬೀದಿ ಬೀದಿಯಲ್ಲಿ ಜನ ಮಾತನಾಡುತ್ತಿದ್ದಾರೆ. ಆದ್ದರಿಂದ ನಾನು ಹೇಳಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವುದು ಒಂದೇ ಗುರಿ ಎಂದರು.

Total Views 64
RELATED ARTICLES

Most Popular

Recent Comments

KNN City News
Home
E-Paper