Monday, November 23, 2026
HomeBelagaviಗೋಕಾಕ್ ಸಾಹುಕಾರ್ ವಿರುದ್ಧ ಅಥಣಿ ಸಾಹುಕಾರ್ ಬಾಂಬ್

ಗೋಕಾಕ್ ಸಾಹುಕಾರ್ ವಿರುದ್ಧ ಅಥಣಿ ಸಾಹುಕಾರ್ ಬಾಂಬ್

ಬೆಳಗಾವಿ
ನಾನು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎನ್ನುವವರು ಶೀಘ್ರದಲ್ಲೇ ಜೆಡಿಎಸ್ ಗೆ ಸೇರ್ಪಡೆಯಾಗುತ್ತಾರೆ ಎಂದು ಪರೋಕ್ಷವಾಗಿ ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಅಥಣಿ ಶಾಸಕ ಲಕ್ಷ್ಮಣ ಸವದಿ ಬಾಂಬ್ ಸಿಡಿಸಿದರು.
ಭಾನುವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೆಲಸ ಇಲ್ಲದವರು ಇಂಥ ಚರ್ಚೆ ಮಾಡುತ್ತಾರೆ. ಅಂಥದಕ್ಕೆ ನಾವು ತಲೆ ಕಡೆಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾರೂ ಇಂಥ ಚರ್ಚೆ ಮಾಡ್ತೋರೋ ಅವರು ಬೇರೆ ಪಕ್ಷಕ್ಕೆ ಹೋಗುವ ಚಿಂತನೆಯಲ್ಲಿ ಇದ್ದಾರೆ ಎಂದು ಶಾಸಕ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದರು.
ನಾನು ಕೊನೆಯವರೆಗೂ ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ‌. ತಲೆ, ಬುಡ ಇಲ್ಲದವರ ಹೇಳಿಕೆಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ. ನನೆ ಮೈತುಂಬ ಕೆಲಸ ಕೆಲಸ ಇದೆ. ನನ್ನ ಕ್ಷೇತ್ರದ ಅಭಿವೃದ್ಧಿ ಮಾಡಬೇಕಿದೆ ಎಂದರು.
ನಾನು ಬಿಜೆಪಿಗೆ ಬಂದರೆ ತೆಗೆದುಕೊಳ್ಳುವುದಿಲ್ಲ ಎನ್ನವ ರಮೇಶ್ ಜಾರಕಿಹೊಳಿ ಅವರೇ ಶೀಘ್ರದಲ್ಲೇ ಜೆಡಿಎಸ್ ಹೊಗ್ತಾರೆ ಕಾಯ್ತಿರಿ ಎಂದರು.

Total Views 126
RELATED ARTICLES

Most Popular

Recent Comments

KNN City News
Home
E-Paper