Monday, November 23, 2026
HomeBelagaviಕುಖ್ಯಾತ ಬೈಕ್ ಕಳ್ಳನ ಹೆಡೆಮುರಿ ಕಟ್ಟಿದ ಯಮಕನಮರಡಿ ಪೊಲೀಸರು

ಕುಖ್ಯಾತ ಬೈಕ್ ಕಳ್ಳನ ಹೆಡೆಮುರಿ ಕಟ್ಟಿದ ಯಮಕನಮರಡಿ ಪೊಲೀಸರು

 

ಬೆಳಗಾವಿ
ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಬೈಕ್ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕುಖ್ಯಾತ ಹಳೇ ಅಪರಾಧಿಯನ್ನು ಬಂಧಿಸಿ, 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆನಕನಹೊಳಿ ಗ್ರಾಮದ ಹದ್ದಿನಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಆತನು ಸರಣಿ ಕಳ್ಳತನಗಳಲ್ಲಿ ತೊಡಗಿರುವುದು ಬಹಿರಂಗವಾಯಿತು.
ಬಂಧಿತನನ್ನು ಸಂಜು @ ಸಂಜ್ಞಾ ಮಲ್ಲಪ್ಪಾ ಮೇಕಲಿ (25) ಗುರುತಿಸಲಾಗಿದೆ. ಇದಕ್ಕೂ ಮೊದಲು, ಏಪ್ರಿಲ್ 11ರಂದು ನರಸಿಂಗಪೂರ ಗ್ರಾಮದ ಅಂಡರ್ ಪಾಸ್ ಸೇತುವೆ ಹತ್ತಿರ ಗಂಗಪ್ಪ ಕೊಡದವರ ಅವರಿಗೆ ಸೇರಿದ ಬಜಾಜ್ ಪ್ಲಾಟಿನಾ ಮೋಟಾರ್ ಸೈಕಲ್ ಕಳ್ಳತನವಾಗಿದ್ದು, ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಪಿ.ಐ ಜೆ.ಎಫ್. ಮುಶಾಪುರಿ ಹಾಗೂ ಪಿ.ಎಸ್.ಐ ಬಿ.ಕೆ. ಪಾಟೀಲ ಅವರ ನೇತೃತ್ವದಲ್ಲಿ ಸಿಬ್ಬಂದಿ ಜಿ.ಬಿ. ನಾಗನ್ನವರ ಮತ್ತು ಪಿ.ಕೆ. ಕಿಳ್ಳಿಕೇತರ ಒಳಗೊಂಡ ತಂಡ ಕೈಗೊಂಡಿತ್ತು.
ಪೊಲೀಸರ ವಿಚಾರಣೆಯಲ್ಲಿ, ಆರೋಪಿ ವಿವಿಧ ಜಿಲ್ಲೆಗಳು ಹಾಗೂ ಇತರ ರಾಜ್ಯಗಳಲ್ಲಿ ಮೋಜು-ಮಸ್ತಿಗಾಗಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದು, ಅವನ ಮಾಹಿತಿಯ ಮೇರೆಗೆ ಒಟ್ಟು 8 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಕಳ್ಳತನ ಪ್ರಕರಣಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Total Views 480
RELATED ARTICLES

Most Popular

Recent Comments

KNN City News
Home
E-Paper