ಹುಬ್ಬಳ್ಳಿ: ಬೆಳ್ಳಿ ಆಭರಣಗಳ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ಸಂಸ್ಥೆ ‘GOYAZ’, ತನ್ನ 26ನೇ ಮಳಿಗೆಯನ್ನು ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಆರಂಭಿಸಿದ್ದು, ‘ಕಾಂತಾರ’ ಖ್ಯಾತಿಯ ಜನಪ್ರಿಯ ನಟಿ ಸಪ್ತಮಿ ಗೌಡ ಅವರು ಶನಿವಾರ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಹು-ಧಾ ಉಪಮೇಯರ್ ಸಂತೋಷ ಚವ್ಹಾಣ ಸೇರಿದಂತೆ ಕಂಪನಿ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಈ ಭವ್ಯ ಸ್ಟೋರ್, ಆತ್ಯಾಧುನಿಕ ವಿನ್ಯಾಸದ ಆಭರಣಗಳ ಮೂಲಕ ಗ್ರಾಹಕರಿಗೆ ಅಪ್ರತಿಮ ಶಾಪಿಂಗ್ ಅನುಭವ ನೀಡಲು ಸಜ್ಜಾಗಿದೆ.
ಭಾರತದ ಅತಿದೊಡ್ಡ ಲಕ್ಷುರಿ ಸಿಲ್ವರ್ ಜುವೆಲ್ಲರಿ ಬ್ರಾಂಡ್ ಆಗಿ ಹೊರಹೊಮ್ಮುತ್ತಿರುವ ಉಡಿಜಿಂಚಿ, ಶೀಘ್ರದಲ್ಲೇ ಮತ್ತಷ್ಟು ಹೊಸ ಮಾರುಕಟ್ಟೆಗಳಿಗೆ ಪ್ರವೇಶಿಸಲು ಯೋಜಿಸಿದೆ ಎಂದು ಸಂಸ್ಥೆ ತಿಳಿಸಿದೆ.
