
ಬೆಳಗಾವಿ
ಬೆಳಗಾವಿ ನಗರದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಮಾಡವ ನೆಪದಲ್ಲಿ ಅಂತರರಾಜ್ಯ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ದೆಹಲಿ ಹಾಗೂ ಉತ್ತರ ಪ್ರದೇಶ ಪೊಲೀಸರ ಸಹಾಯ ಪಡೆದು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಭೂಷಣ್ ಬೊರಸೆ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಿಂಟು ವಿಶ್ವಾಸ (52) ಬಂಧಿಸಿ ಈತನಿಂದ 45.5 ಲಕ್ಷ ಮೌಲ್ಯದ ಗಟ್ಟಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದಲ್ಲಿ ಗೋವಾ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ದೆಹಲಿಯ ಮನೆಗಳ್ಳತನದ ಗ್ಯಾಂಗ್ ಬಂದು ಕಳ್ಳತನ ಮಾಡತ್ತಿದ್ದಾರೆ. ಅಲ್ಲದೆ, ಕಲಬುರಗಿ, ಶಿವಮೊಗ್ಗದಿಂದಲೂ ಗ್ಯಾಂಗ್ ಬಂದಿವೆ. ಹಗಲಿನಲ್ಲಿ ಹೂವು, ಹಣ್ಣಿನ ವ್ಯಾಪಾರ ಮಾಡುವ ನೆಪದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡು ಹೊಂಚು ಹಾಕಿ ಮನೆಗಳ್ಳತನ ಮಾಡುತ್ತಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಆರೋಪಿಗೆ ಸ್ಥಳೀಯರು ಯಾರಾದರೂ ಸಹಾಯ ಮಾಡಿದ್ದಾರೆ ಎನ್ನುವುದು ತನಿಖೆ ಬಳಿಕ ತಿಳಿದು ಬರಲಿದೆ ಎಂದರು.
ಮತ್ತೊಂದು ಪ್ರಕರಣದಲ್ಲಿ ನಗರದಲ್ಲಿ ನಾಲ್ಕೂವರೆ ಲಕ್ಷ ಮೌಲ್ಯದ ಮನೆಗಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಕೊಲ್ಲಾಪುರದಲ್ಲಿ ಬಂಧಿಸಲಾಗಿದೆ.ಮನೆಗಳ್ಳತನವಾದ ಕೂಡಲೇ ಶ್ವಾನದಳ, ಬೆರಳಚ್ಚು ತಜ್ಞರು ಹೋಗಿ ತಪಾಸಣೆ ಮಾಡಿ ಆರೋಪಗಳನ್ನು ಬಂಧಿಸಿದ್ದಾರೆ ಎಂದರು.
ಬೆಳಗಾವಿ ನಗರ ವಾಸಿಗಳು ಮನೆ ಬಿಟ್ಟು ಹೋಗುವಾಗ ಪೊಲೀಸರಿಗೆ ಮಾಹಿತಿ ನೀಡಿದರೆ ಅಲ್ಲಿ ಪೊಲೀಸ್ ರಾತ್ರಿ ಎರಡು ಬಾರಿ ಸುತ್ತಮುತ್ತಲು ತಪಾಸಣೆ ಮಾಡಿ ಬರುತ್ತಾರೆ. ಇಲ್ಲಿಯವರೆಗೆ 225 ಮನೆಗಳು ಕಳ್ಳತನವಾಗಿಲ್ಲ ಎಂದರು.
ಬೆಳಗಾವಿ ಲಾಕ್ಡ್ ಹೌಸ್ ಸಿಸ್ಟಮ್ ಯಶಸ್ವಿಯಾದ ಮೇಲೆ ಎಲ್ಲ ಜಿಲ್ಲೆಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೂ ಅನುಷ್ಠಾನ ಮಾಡಲು ಪೊಲೀಸ್ ಮಹಾನಿರ್ದೇಶಕರು ಸೂಚನೆ ನೀಡಿದ್ದಾರೆ ಎಂದರು.
