Thursday, November 19, 2026
HomeBelagaviಹಣ ಹೂಡಿಕೆಯಲ್ಲಿ ದೇವರ ಹೆಸರು ಬಳಸಿ ಜನರಿಗೆ ವಂಚನೆ: ಟೋಪಣ್ಣವರ

ಹಣ ಹೂಡಿಕೆಯಲ್ಲಿ ದೇವರ ಹೆಸರು ಬಳಸಿ ಜನರಿಗೆ ವಂಚನೆ: ಟೋಪಣ್ಣವರ

ಬೆಳಗಾವಿ
ಬೆಳಗಾವಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಕೆಲವು ಹೂಡಿಕೆ ಸಂಸ್ಥೆಗಳು ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುತ್ತಿವೆ. ಕೆಲವು ಸಂಸ್ಥೆಗಳು ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳನ್ನು ಬಳಸಿಕೊಂಡು ಜನರಿಂದ ಹಣ ಸಂಗ್ರಹಿಸಿ ಕೆಲವು ಸಂಸ್ಥೆಗಳು ಭಗವಾನ್ ಶಿವನ ಹೆಸರನ್ನು ಬಳಸಿಕೊಂಡು ಜನರ ಭಾವನೆ ಹಾಗೂ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ರಾಜಕುಮಾರ ಟೋಪಣ್ಣವರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು,
ತಿಂಗಳಿಗೆ 3.5 ರಿಂದ 6 ಶೇಕಡಾ ವರೆಗೆ “ಖಚಿತ ಲಾಭ” ನೀಡುವುದಾಗಿ ಹೇಳಿ ಹೂಡಿಕೆ ಆಕರ್ಷಿಸುವುದು, ಹಣವನ್ನು ಎಲ್ಲಿ ಹೂಡಿಕೆ ಮಾಡಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸದೇ ಹಣ ಸಂಗ್ರಹಿಸುವುದು, ಹೂಡಿಕೆಯ ಅಪಾಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡದಿರುವುದು ಸೇರಿದಂತೆ ಹಲವು ರೀತಿಯ ಚಟುವಟಿಕೆಗಳು ನಡೆಯುತ್ತಿವ.
ಸಾರ್ವಜನಿಕರು ಯಾವುದೇ ಹೂಡಿಕೆ ಮಾಡುವ ಮೊದಲು ಭಾರತೀಯ ಭದ್ರತಾ ಪತ್ರಗಳು ಮತ್ತು ವಿನಿಮಯ ಮಂಡಳಿ SEBI ಯಲ್ಲಿ ನೋಂದಾಯಿತವಾಗಿದೆಯೇ, ಹೂಡಿಕೆ ವಿಧಾನ ಸ್ಪಷ್ಟವಾಗಿದೆಯೇ ಹಾಗೂ “ಖಚಿತ ಆದಾಯ” ಭರವಸೆ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
ವಿಶೇಷವಾಗಿ ನಿವೃತ್ತ ಸೈನಿಕರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ. ಜೀವನಪೂರ್ತಿ ಸಂಗ್ರಹಿಸಿದ ಹಣವನ್ನು ಹೂಡಿಕೆ ಮಾಡುವ ಮೊದಲು ಕುಟುಂಬದವರು ಹಾಗೂ ಹಣಕಾಸು ತಜ್ಞರ ಸಲಹೆ ಪಡೆಯುವಂತೆ ಮನವಿ ಮಾಡಲಾಗಿದೆ.ಈ ಪ್ರಕಟಣೆ ಸಾರ್ವಜನಿಕ ಜಾಗೃತಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ನಿರ್ದಿಷ್ಟ ಸಂಸ್ಥೆಯನ್ನು ನೇರವಾಗಿ ಆರೋಪಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು‌.

Total Views 121
RELATED ARTICLES

Most Popular

Recent Comments

KNN City News
Home
E-Paper