Thursday, November 19, 2026
HomeBelagaviನಾಳೆ ನನ್ನ ಹೆಂಡತಿ ಮದುವೆ ಇದೆ ನಿಲ್ಲಿಸಿ: ವೆಂಕಟೇಶ್ವರ

ನಾಳೆ ನನ್ನ ಹೆಂಡತಿ ಮದುವೆ ಇದೆ ನಿಲ್ಲಿಸಿ: ವೆಂಕಟೇಶ್ವರ

 

ಬೆಳಗಾವಿ
ಕಳೆದ 2016ರಿಂದ ಪರಿಚಯವಾಗಿದ್ದ ಮಹಿಳೆಯನ್ನು 2022ರಲ್ಲಿ ಮದುವೆಯಾಗಿದ್ದೇನೆ. ಆದರೆ ಇದೀಗ ಆಕೆಯ ಮನೆಯವರು ಕಿರುಕುಳ ನೀಡಿ, ಮತ್ತೊಬ್ಬರೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ವೆಂಕಟೇಶ್ವರ ರಾಠೋಡ್ ಆರೋಪಿಸಿದ್ದಾರೆ.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರೆಬಾಗೇವಾಡಿಯ ರುದ್ರಪ್ಪ ಹಂಚಿನಮನಿ ಹಾಗೂ ಅವರ ಪುತ್ರ ಪ್ರದೀಪ್ ಹಂಚಿನಮನಿ ತಮ್ಮ ಪತ್ನಿ ಮಂಜುಳಾ ಹಂಚಿನಮನಿಯನ್ನು ಮನೆಯಲ್ಲೇ ಕೂಡಿಹಾಕಿ ಇಟ್ಟಿದ್ದಾರೆ ಎಂದು ದೂರಿದರು.
ಇದಲ್ಲದೆ, ನನ್ನ ವಿರುದ್ಧ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಿ ಷಡ್ಯಂತ್ರ ರೂಪಿಸಿ ಜೈಲಿಗೂ ಕಳುಹಿಸಿದ್ದರು ಎಂದು ಆರೋಪಿಸಿದರು. “ನಾನು ಹಾಗೂ ನನ್ನ ಪತ್ನಿ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದೇವೆ. ಆದರೆ ಈಗ ಆಕೆಯನ್ನು ಮತ್ತೊಬ್ಬರಿಗೆ ಮದುವೆ ಮಾಡಲು ಯತ್ನಿಸಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.
ಪತ್ನಿಯ ಮನೆಯವರಿಗೆ ಮನೆ ನಿರ್ಮಾಣಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಸಹ ನೀಡಿದ್ದೇನೆ ಎಂದು ಹೇಳಿದ ಅವರು, ಈ ಸಂಬಂಧ ಅಕ್ಕ ಪಡೆ ಸಂಪರ್ಕಿಸಲು ಪ್ರಯತ್ನಿಸಿದ್ದಾಗಿ ತಿಳಿಸಿದರು.
ಇತ್ತೀಚೆಗೆ ಹಿರೆಬಾಗೇವಾಡಿಯಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿ, ಬಂಗಾರ ಹಾಗೂ ಹಣ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿದ ವೆಂಕಟೇಶ್ವರ ರಾಠೋಡ್, ಈ ಕುರಿತು ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಹೇಳಿದರು.

Total Views 196
RELATED ARTICLES

Most Popular

Recent Comments

KNN City News
Home
E-Paper