Monday, November 23, 2026
HomeBelagaviಗ್ರಾಮೀಣ ಮಕ್ಕಳಿಗೆ ಶಿಬಿರದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ: ಮಠಪತಿ

ಗ್ರಾಮೀಣ ಮಕ್ಕಳಿಗೆ ಶಿಬಿರದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ: ಮಠಪತಿ

 

ಮುಗಳಖೋಡ
ಪೋಷಕರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಜೊತೆಗೆ ಪ್ರಕೃತಿಯ ಮಹತ್ವ ಹೇಳಿಕೊಟ್ಟರೆ ಮಾತ್ರ
ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಬಿರ ಆಯೋಜಿಸುವುದರಿಂದ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಹಿರಿಯ ಪತ್ರಕರ್ತ ವಿನಾಯಕ ಮಠಪತಿ ಅಭಿಪ್ರಾಯಪಟ್ಟರು.

ಶುಕ್ರವಾರ ಮುಗಳಖೋಡ ಪಟ್ಟಣದಲ್ಲಿ ಚೈಲ್ಡ್ ಸ್ಕಿಲ್ ಸೆಂಟರ್ ಧಾರವಾಡ ಹಾಗೂ ಅರಭಾವಿ ಫೌಂಡೇಶನ್ ಸಹಯೋಗದೊಂದಿಗೆ ಜರುಗಿದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಬಾಲ್ಯದಲ್ಲಿಯೇ ಪರಿಸರದ ಕಾಳಜಿಯನ್ನು ಮಕ್ಕಳಲ್ಲಿ ಬಿತ್ತಿದಾಗ ಅದರ ಅರಿವಿನಿಂದ ಸಸ್ಯ ಹಾಗೂ ಪ್ರಾಣಿ ಸಂಕುಲದ ಜೊತೆಗೆ ಮಾನವನ ಉಳಿಯುವ ಅತ್ಯಗತ್ಯವಾಗಿದೆ. ಅರಭಾವಿ ಫಾರ್ಮ್ ಹೌಸ್ ನಲ್ಲಿ ಮಕ್ಕಳಲ್ಲಿ ನಿಸರ್ಗ ಕಲಿಕೆ ಅಡಿಯಲ್ಲಿ ಪರಿಸರ ಪ್ರಜ್ಞೆ, ಕನ್ನಡತನ, ಭರತನಾಟ್ಯ, ಶಾಸ್ತ್ರೀಯ ಸಂಗೀತ , ಕಂಪ್ಯೂಟರ್ ಕಲಿಕೆ ,ಸ್ಪೋಕನ್ ಇಂಗ್ಲಿಷ್, ಸಂಸ್ಕಾರ, ಏರೋಬಿಕ್ಸ್ ,ಸಾಹಸಕ್ರೀಡೆ, ಜೊತೆಗೆ ಪರಿಸರ ಕಾಳಜಿ, ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ ನಿಜಕ್ಕೂ ಶ್ಲಾಘನೀಯ ಎಂದರು.

ಮುಗಳಖೋಡದ ಸಮುದಾಯ ಆರೋಗ್ಯ ಕೇಂದ್ರದ ನೇತ್ರ ವೈದ್ಯಾಧಿಕಾರಿ ಅಶ್ವಿನಿ ಜುಗೂಳಿ ಮಾತನಾಡಿ, ಅರಭಾವಿ ಫೌಂಡೇಶನ್ ನಡೆಸುತ್ತಿರುವ ಗುರುಕುಲ ಮಾದರಿಯಲ್ಲಿ ಬಾಲ ಸಂಸ್ಕಾರ ಶಿಬಿರ ಮಕ್ಕಳಲ್ಲಿ ಆತ್ಮಸ್ಥೈರ್ಯ , ಶಿಕ್ಷಣ, ತಂತ್ರಜ್ಞಾನ, ಕಲೆ, ಸಾಹಿತ್ಯ, ಪರಿಸರ ಕಾಳಜಿ, ಯೋಗ ,ತರಬೇತಿಗಳು, ಸ್ವಾವಲಂಬಿ ಜೀವನ ನಡೆಸಲು ಪೂರಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇವುಗಳಲ್ಲಿ ಪಾಲ್ಗೊಂಡ ಮಕ್ಕಳು ಮನೆಯಲ್ಲಿ ಹಾಗೂ ಸಮಾಜದಲ್ಲಿ ಉತ್ತಮವಾಗಿ ಜೀವನ ನಿರ್ವಹಿಸುತ್ತಾರೆ . ಆದಕಾರಣ ನನ್ನ ಮಗನನ್ನು ಕೂಡ ಶಿಬಿರದಲ್ಲಿ 40 ದಿನಗಳ ಕಾಲ ಕಲಿಕೆಗೆ ಬಿಡಲಾಗಿದೆ ಎಂದರು.

ಅರಭಾವಿ ಫೌಂಡೇಶನ್ ಗೌರವ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಮಾರುತಿ ಅರಭಾವಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಬಿರದಲ್ಲಿ 60ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಧಾರವಾಡದ ಚೈಲ್ಡ್ ಸ್ಕಿಲ್ ಸೆಂಟರ್‌ನ ವ್ಯವಸ್ಥಾಪಕಿ ಅಶ್ವಿನಿ ಟಿ , ಅರಭಾವಿ ಫೌಂಡೇಶನ್ ಅಧ್ಯಕ್ಷ ಸಂತೋಷ ಅರಭಾವಿ, ಪತ್ರಕರ್ತ ಸಿ ಎಸ್ ಹಿರೇಮಠ , ಅಶೋಕ ಕದಂ , ಗುತ್ತಿಗೆದಾರ ಯಲ್ಲಾಲಿಂಗ ಗೋಕಾಕ , ಯುವ ಧುರೀಣ ಆನಂದ ಮೆಕ್ಕಳಕಿ, ಪೌರಕಾರ್ಮಿಕ ವಿಜಯ ನಡುವಿನಕೇರಿ , ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.

ಮಕ್ಕಳು ಕರಾಟೆ, ಸಂಗೀತ, ಶಾಸ್ತ್ರೀಯ ಸಂಗೀತ , ಕಲೆ, ಸಾಹಿತ್ಯ, ಚಿತ್ರಕಲೆ, ನೃತ್ಯ, ಹಾಡುಗಾರಿಕೆ ,ಕೃಷಿ ,ತೋಟಗಾರಿಕೆ, ಪರಿಸರ ಪ್ರಜ್ಞೆ ಕಲಿತು ಸಮಾಜಮುಖಿಯಾಗುತ್ತಾರೆ . ಮುಂದಿನ ದಿನಮಾನಗಳಲ್ಲಿ ಮಕ್ಕಳಿಗಾಗಿ ಪ್ರಶಸ್ತಿ ಪ್ರಧಾನ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಸಂತೋಷ ಅರಭಾವಿ
ಅಧ್ಯಕ್ಷರು, ಅರಭಾವಿ ಫೌಂಡೇಶನ್ ಮುಗಳಖೋಡ

Total Views 38
RELATED ARTICLES

Most Popular

Recent Comments

KNN City News
Home
E-Paper