
ಬೆಳಗಾವಿ
ಶಿವಾನಂದ ನೀಲಣ್ಣನವರ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ, ಅವರ ಸಂಸ್ಥೆ ವತಿಯಿಂದ ಐಷಾರಾಮಿ ರೆಸಾರ್ಟ್ನಲ್ಲಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ಸಭೆ ನಡೆಸಿ ಪ್ರಚಾರಕ್ಕೆ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ.
ಬೆಳಗಾವಿ ಹೊರವಲಯದ ರೆಸಾರ್ಟ್ನಲ್ಲಿ ನಡೆದ ಸಭೆಯಲ್ಲಿ 25ಕ್ಕೂ ಹೆಚ್ಚು ಇನ್ಫ್ಲುಯೆನ್ಸರ್ಗಳು ಭಾಗವಹಿಸಿದ್ದು, ವಾಸ್ತವ್ಯ, ಉಡುಗೊರೆ ಹಾಗೂ ಇತರ ಸೌಲಭ್ಯಗಳನ್ನು ನೀಡಲಾಗಿದೆ ಎನ್ನಲಾಗಿದೆ. “ಸ್ವಚ್ಛ ಬೆಳಗಾವಿ” ಕಾರ್ಯಕ್ರಮದ ಪ್ರಚಾರದ ಜೊತೆಗೆ ಶಿವಾನಂದ ನೀಲಣ್ಣನವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವಂತೆ ಸೂಚನೆ ನೀಡಲಾಗಿತ್ತು ಎಂಬ ಆರೋಪವೂ ಇದೆ.
ಈ ಸಂಬಂಧ ಉಡುಗೊರೆ ಅಥವಾ ಲಾಭ ಪಡೆದವರ ಮಾಹಿತಿ ಸಿಐಡಿ ಕಲೆಹಾಕುತ್ತಿದ್ದು, ಸಭೆಯಲ್ಲಿ ಭಾಗವಹಿಸಿದ್ದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಶಿವಾನಂದ ಪರ ಪ್ರಚಾರ ನಡೆಸಿದ್ದಾರೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.
