Thursday, November 19, 2026
HomeHubli-Dharwadರಾಜ್ಯ ಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಸಾಹಿತಿ ನವೀದ್ ಮುಲ್ಲಾ ಆಯ್ಕೆ

ರಾಜ್ಯ ಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಸಾಹಿತಿ ನವೀದ್ ಮುಲ್ಲಾ ಆಯ್ಕೆ

 

ಹುಬ್ಬಳ್ಳಿ . ಮಂಡ್ಯದ ಡಾ.ಜೀಶಂಪ ಕನ್ನಡ ಸಾಹಿತ್ಯ ವೇದಿಕೆ, ಕನ್ನಂಬಾಡಿ ದಿನಪತ್ರಿಕೆ,ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಮಂಡ್ಯ ಇವರ ಸಹಯೋಗದಲ್ಲಿ ಜೂನ್ ೦7 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಾಡು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಪ್ರಥಮ ಮಹಿಳಾ ಕನ್ನಡ ಅಕ್ಷರ ಜಾತ್ರೆ ಮಂಡ್ಯದ ಕರ್ನಾಟಕ ಸಂಘದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಸಾಹಿತ್ಯ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಹಿತಿ ಹಾಗೂ ಸಮಾಜ ಸೇವಕರಾದ ನವೀದ್ ಮುಲ್ಲಾ ಅವರನ್ನು ‘ರಾಜ್ಯ ಮಟ್ಟದ ಪ್ರತಿಷ್ಠಿತ ‘ರಾಜರ್ಷೀ ನಾಲ್ವಡಿ ಕೃಷ್ಣರಾಜ ಒಡೆಯರ್’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಲೇಖಕ,ಕವಿ ಹಾಗೂ ಸಿನಿಮಾ ನಿರ್ದೇಶಕರಾದ ಎಸ್. ಕೃಷ್ಣಸ್ವರ್ಣಸಂದ್ರ ಎಂ, ಎಂ. ರವರು ತಿಳಿಸಿದ್ದು, ಐದು ಸಾವಿರ ನಗದು, ಪ್ರಶಸ್ತಿ ಪತ್ರ, ಗೌರವ ಸನ್ಮಾನ ಹಾಗೂ ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ ಎಂದಿರುವ ಅವರು ಸಾಹಿತಿ ನವೀದ್ ಅವರನ್ನು ಅಭಿನಂದಿಸಿ ಮಂಡ್ಯದಲ್ಲಿ ನಡಯುವ ಸಮ್ಮೇಳನಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

Total Views 26
RELATED ARTICLES

Most Popular

Recent Comments

KNN City News
Home
E-Paper