Monday, November 23, 2026
HomeBelagaviಪತ್ರಕರ್ತರ ಮೇಲೆ ಆದಿತ್ಯರಾಜ್ ಕ್ಯಾಪಿಟಲ್ ಸಿಬ್ಬಂದಿಗಳ ಗುಂಡಾವರ್ತನೆ

ಪತ್ರಕರ್ತರ ಮೇಲೆ ಆದಿತ್ಯರಾಜ್ ಕ್ಯಾಪಿಟಲ್ ಸಿಬ್ಬಂದಿಗಳ ಗುಂಡಾವರ್ತನೆ

ಬೆಳಗಾವಿ
ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆ ನಗರದ ಭಾಗ್ಯನಗರದಲ್ಲಿರುವ ಕಂಪನಿ ಕಚೇರಿ ಬಳಿ ಶುಕ್ರವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಮಾಹಿತಿ ಸಂಗ್ರಹಿಸಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಂಪನಿ ಸಿಬ್ಬಂದಿ ಗೂಂಡಾವರ್ತನೆ ನಡೆಸಿದ ಆರೋಪ ಕೇಳಿಬಂದಿದೆ. ಮಹಿಳಾ ಸಿಬ್ಬಂದಿ ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳು ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಕೆಲವರು ಗುಂಪು ಕಟ್ಟಿಕೊಂಡು ನಿಂದನೆ ನಡೆಸಿದ್ದಾರೆ.
ಇದೇ ವೇಳೆ ಕೆಲ ಪುರುಷ ಸಿಬ್ಬಂದಿಯೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಾಗ್ವಾದ ನಡೆಸಿ ಹಲ್ಲೆಗೆ ಮುಂದಾದ ಆರೋಪ ಕೇಳಿಬಂದಿದೆ. ಕಂಪನಿ ಮಾಲೀಕ ಬಾಲರಾಜ್ ಮಾನೆ ಪರವಾಗಿ ಸಿಬ್ಬಂದಿ ಬ್ಯಾಟಿಂಗ್ ನಡೆಸಿದ್ದು, ಉದ್ದೇಶಪೂರ್ವಕವಾಗಿ ದಾಳಿ ಮಾಡಲು ಯತ್ನಿಸಲಾಗಿದೆ.

Total Views 225
RELATED ARTICLES

Most Popular

Recent Comments

KNN City News
Home
E-Paper