
ಬೆಳಗಾವಿ
ಅನೈತಿಕ ಸಂಬಂಧ ಹಾಗೂ 2 ಕೋಟಿ ರೂ. ಪಾಲಿಸಿ ಹಣಕ್ಕಾಗಿ ಪ್ರಿಯಕರನೊಂದಿಗೆ ಮಾಜಿ ಸೈನಿಕನನ್ನೇ ಹೆಂಡತಿ ಕೊಲೆ ಮಾಡಿ ಮುಚ್ಚಿ ಹಾಕಲು ಯತ್ನಿಸಿದ ಪ್ರಕರಣವನ್ನು ಯಮಕನಮರಡಿ ಸಿಪಿಐ ಜಾವೇದ್ ಮುಷಾಪುರೆ ಚಾಣಾಕ್ಷತನದಿಂದ ಬಯಲಿಗೆ ಬಂದಿದೆ.
ಯಮಕನಮರಡಿ ಜಾತ್ರೆಯಲ್ಲಿ ಮಾಜಿ ಸೈನಿಕ ಸಂದೀಪ್ ಮಾಂಜರೆ ಜಾತ್ರೆಯಲ್ಲಿ ಸಣ್ಣ ಅಪಘಾತವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಕ್ರಮೇಣವಾಗಿ ಗುಣಮುಖರಾಗುತ್ತಿದ್ದ ಮಾಜಿ ಸೈನಿಕನಿಗೆ ಕುಡಿತದ ಚಟವಿತ್ತು. ಈತ ಗುಣಮುಖದಾದರೆ ಮುಂದೆ ಹೆಂಡತಿಯ ಅನೈತಿಕ ಸಂಬಂಧ ಹಾಗೂ ಪಾಲಿಸಿ ಹಣಕ್ಕೆ ಕಂಟಕವಾಗುತ್ತಾನೆ ಎಂದು ಆಸ್ಪತ್ರೆಯ ಸಲಾಯಿನ್ ನಲ್ಲಿ ಕ್ರಿಮಿನಾಶಕ ಔಷಧಿ ಹಾಕಿ ಮಾಜಿ ಸೈನಿಕನನ್ನು ಕೊಲೆ ಮಾಡಿ ಲ್ಯಾಬ್ ನಲ್ಲಿನ ಸಿಬ್ಬಂದಿಗಳು ಶಾಮಿಲಿನಿಂದ ಅಪಘಾತದಲ್ಲಿ ಸಾವು ಎಂದು ಬಿಂಬಿಸಿದ್ದ ಖಿಲಾಡಿ ಹೆಂಡತಿ ಹಾಗೂ ಆಕೆಯ ಪ್ರೀಯಕರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆ ಮಾಡಿದ್ದು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಆದರೆ ಕೊಲೆ ಪ್ರಕರಣವನ್ನು ಚಾಣಾಕ್ಷತನದಿಂದ ನಡೆಸುವ ಸಿಪಿಐ ಜಾವೇದ್ ಮುಷಾಪುರೆ ಎಲ್ಲ ಆಯಾಮದಿಂದ ತನಿಖೆ ಮಾಡಿ ಮಾಜಿ ಸೈನಿಕನ ಸಾವಿನ ಹಿಂದೆ ತನಿಖೆ ನಡೆಸಿ ಎಫ್ಎಸ್ ಎಲ್ ಲ್ಯಾಬ್ ಗೆ ತನಿಖೆಗೆ ಕಳುಸಿದರೂ ಕೊಲೆ ಪ್ರಕರಣದ ಬಗ್ಗೆ ಸುಳಿವು ಸಿಗಲಿಲ್ಲ. ಲ್ಯಾಬ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಬಲೆಗೆ ಹಾಕಿಕೊಂಡು ಮಾಜಿ ಸೈನಿಕನ ಹೆಂಡತಿ ಹಾಗೂ ಪ್ರಿಯಕರ ಕೊಲೆ ಮಾಡಿರುವುದು ಬಹಿರಂಗವಾಗಿದೆ. ಮಾಜಿ ಸೈನಿಕನ ಹೆಂಡತಿಯ ಅನೈತಿಕ ಸಂಬಂಧದ ಕುರಿತು ಮಾಹಿತಿ ತಿಳಿದು ಬರುತ್ತಿದ್ದಂತೆಯೇ ಹೆಂಡತಿ ಹಾಗೂ ಪ್ರಿಯಕರನ ವಿಚಾರಣೆ ನಡೆಸಿದಾಗ ಮಾಜಿ ಸೈನಿಕನ ಕೊಲೆ ಮಾಡಿರುವುದು ಬಹಿರಂಗಗೊಂಡಿದ್ದೆ. ಇನ್ನಷ್ಟು ಮಾಹಿತಿ ತನಿಖೆಯ ಬಳಿಕ ತಿಳಿದು ಬರಲಿದೆ. ಘಟಪ್ರಭಾ ಹಾಗೂ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
