
ಬೆಳಗಾವಿ
ಮಾಜಿ ಸಂಸದ ರಮೇಶ್ ಕತ್ತಿ ಅವರ ಫೇಸ್‌ಬುಕ್ ಪೋಸ್ಟ್ ಹಾಗೂ ಇತ್ತೀಚಿನ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ತಿರುಗೇಟಾಗಿ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಕೌಂಟರ್ ಪೋಸ್ಟ್ ಮಾಡಿದ್ದಾರೆ.
ಹುಕ್ಕೇರಿ ಪಟ್ಟಣದ ರಾಣಿ ಯಮಕನಮರಡಿ ಕುರಿತು “ಪ್ರೀತಿಯ ರಾಣಿ” ಎಂದು ರಮೇಶ್ ಕತ್ತಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ, ಕತ್ತಿ ಅವರನ್ನು ಪರೋಕ್ಷವಾಗಿ ಟೀಕಿಸಿ, “ಬೊಗಳುವ ಕತ್ತಿಗಳತ್ತ ಕಲ್ಲು ತೂರುತ್ತ ಹೋದರೆ ಗುರಿ ಮುಟ್ಟಲು ಸಾಧ್ಯವಿಲ್ಲ” ಹಾಗೂ “ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.
ಇದೇ ಪೋಸ್ಟ್‌ನಲ್ಲಿ, “ನಮ್ಮ ಸಾಹುಕಾರ್ ವಿರುದ್ಧ ನೂರು ನಾಯಿ ಬೊಗಳಿದರೂ ಏನೂ ಮಾಡಲು ಆಗಲ್ಲ” ಮತ್ತು “ಸಂವಿಧಾನದ ಮುಂದೆ ಯಾವ ಚಡ್ಡಿಗಳ ಆಟವೂ ನಡೆಯುವುದಿಲ್ಲ” ಎಂದು ಕತ್ತಿಗೆ ತಿರುಗೇಟು ನೀಡಿರುವ ಸತೀಶ್ ಅಭಿಮಾನಿಗಳು ಈ ಪೋಸ್ಟ್ ಇದೀಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
