ಹುಬ್ಬಳ್ಳಿ, ಜೂ.25: ಮತದಾರರಲ್ಲಿ ಜಾಗೃತಿ ಮೂಡಿಸುವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಒತ್ತು ನೀಡಿದ ಈ ಸಮಾವೇಶ ಯಶಸ್ವಿಯಾಗಿ ನಡೆಯಿತು. ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಬೆಳಗಾವಿ ವಿಭಾಗ ಮಟ್ಟದ “ಎಸ್‌ಐಆರ್ (SIR) ಜನಜಾಗೃತಿ ಸಮಾವೇಶ – ಕಾಂಗ್ರೆಸ್ ನಡೆ, ಮತ ರಕ್ಷಣೆ ಕಡೆಗೆ” ಕಾರ್ಯಕ್ರಮ ಇಂದು ಹುಬ್ಬಳ್ಳಿಯ ಬಾಬು ಜಗಜೀವನ್ ರಾಮ್ ಸಮದಾಬಾದ್ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವ ವಹಿಸಿದ್ದರು. ಸಮಾವೇಶದಲ್ಲಿ ಶಾಸಕರು, ಕಾಂಗ್ರೆಸ್ ಮುಖಂಡರು, ವಿವಿಧ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರ ದೀಪಕ್ ಚಿಂಚೋರೆ. ಸಭೆ ಬಹಳ ಯಶಸ್ವಿಯಾಗಿ ನಡೆಯಿತುಇದು ಜನ ಕೂಡಿಸೋ ಪ್ರೋಗ್ರಾಮ್ ಅಲ್ಲ ಇದು ಜನರಿಗೆ, ಮತದಾರರನ್ನ ಕಟ್ಟಿಹಾಕಿದಂಗೆ ಜೋಡಿಸು ಪ್ರೋಗ್ರಾಮ್.
BJPಯವರು ನಮ್ಮ ಮೂಲಭೂತ voting ಹಕ್ಕು ತೆಗೆಯುವಂತ ವ್ಯವಸ್ಥೆಯನ್ನ ಮಾಡಿದ್ದಾರೆ. ಅದನ್ನು ತಡೆ ಹಿಡಿಯಲಿಕ್ಕೆ ಇದು ಬಹಳ ಸುಂದರವಾದಂತ ಕಾರ್ಯಕ್ರಮ.
SIR ಕಾರ್ಯಕ್ರಮ. ನಮ್ಮ 270 ಬೂತ್‌ಗಳು ಗಟ್ಟಿ ಆದ ಮೇಲೆ ಮುಂದಿನ ಚುನಾವಣೆ ಬರುತ್ತೆ. ಎಲ್ಲ ಬೂತ್ ಮಜಬೂತ್ ಆದರೆ ಪಾರ್ಟಿ ಮಜಬೂತ್. ಪಾರ್ಟಿ ಮಜಬೂತ್ ಆದರೆ ದೇಶ ಗೆಲ್ಲಬಹುದುಯಂದು ಹೇಳಿದರು
