Monday, November 23, 2026
HomeBelagaviಮೀಟರ್ ಬಡ್ಡಿ ನಡೆಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಮೀಟರ್ ಬಡ್ಡಿ ನಡೆಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ
ಕಾನೂನು ಬಾಹಿರವಾಗಿ ಮೀಟರ್ ಬಡ್ಡಿ ದಂಧೆ ನಡೆಸಿ ಸಾಲಗಾರನಿಗೆ ಜೀವ ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ರೋಹಿದಾಸ ಗಲ್ಲಿಯ ವಿಠಲ ತುಕಾರಾಮ ಮಾನೆ 3.10 ಲಕ್ಷ ಸಾಲ ಪಡೆದು, ಇದುವರೆಗೆ 18.60 ಲಕ್ಷ ಬಡ್ಡಿ ಪಾವತಿಸಿದ್ದರೂ ಆರೋಪಿಗಳು ಮತ್ತಷ್ಟು ಹಣಕ್ಕಾಗಿ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದರೆಂದು ದೂರು ನೀಡಿದ್ದರು. ದೂರಿನ ಮೇರೆಗೆ ಆದಿತ್ಯ ಅಶೋಕ ಭೋಸಲೆ ಹಾಗೂ ಅಭಿಷೇಕ ಅಶೋಕ ಭೋಸಲೆಯನ್ನು ಬಂಧಿಸಿರುವ ಪೊಲೀಸರು ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Total Views 141
RELATED ARTICLES

Most Popular

Recent Comments

KNN City News
Home
E-Paper