
ಬೆಳಗಾವಿ
ನಗರದ ಕ್ಯಾಂಪ್ ಪ್ರದೇಶದ ಜಿಮಖಾನಾ ರಮ್ಮಿ ಕ್ಲಬ್‌ನಲ್ಲಿ ರೌಡೀಶೀಟರ್ ಸುರೇಶ ಜಾಲಗಾರ ಮೇಲೆ ನಡೆದ ಫೈರಿಂಗ್ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಆರೋಪಿಗಳನ್ನು ಸ್ಥಳಕ್ಕೆ ಕರೆತಂದಿದ್ದ ಕಾರು ಚಾಲಕನನ್ನು ಬಂಧಿಸಿದ್ದಾರೆ.
ಫೈರಿಂಗ್ ನಡೆಸಿದ ಆರೋಪಿಗಳಿಗೆ ಸಹಕಾರ ನೀಡಿದ ಆರೋಪದಡಿ ಬಂಧಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, ಬಳಿಕ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದರು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.
ಜಿಮ್ಖಾನಾ ರಮ್ಮಿ ಕ್ಲಬ್‌ನಲ್ಲಿ ನಡೆದ ಘಟನೆ ವೇಳೆ ದುಷ್ಕರ್ಮಿಗಳು ರೌಡೀಶೀಟರ್ ಸುರೇಶ ಜಾಲಗಾರನ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದರು. ಆದರೆ ಸುರೇಶ ಜಾಲಗಾರ ಸಮಯಪ್ರಜ್ಞೆಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಪ್ರಪುಲ್ ಪಾಟೀಲ್ ಹಾಗೂ ಸುರೇಶ ಜಾಲಗಾರ ನಡುವಿನ ಹಳೆಯ ವೈಷಮ್ಯವೇ ಫೈರಿಂಗ್‌ಗೆ ಕಾರಣ ಎನ್ನಲಾಗಿದೆ. ಪ್ರಪುಲ್ ಪಾಟೀಲ್ ಪರದ ಆರೋಪಿಗಳು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫೈರಿಂಗ್ ಸಂಚು ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವವರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.
