
ಬೆಳಗಾವಿ
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಶಗಣಮಟ್ಟ ಲೀಫ್ ಫಾರ್ಮ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೂಜಾಟದ ಅಡ್ಡೆಯ ಮೇಲೆ ದಾಳಿ ಮಾಡಿರುವ ಪೊಲೀಸರು 10 ಜನರನ್ನು ಬಂಧಿಸಿ 1,22,016 ನಗದು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣ ಕಟ್ಟಿ “ಅಂದರ್-ಬಾಹರ್” ಎಂಬ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಚೇತನ ಚಂದಗಡಕರ, ಸಂತೋಷ ಕೋಲಕಾರ, ರಂಜಾನ್ ಮುಲ್ಲಾ, ಖತಾಲಹೃದ ಭಕ್ಷಿ, ಮುದಸ್ಪರ ಮುಜಾವರ, ಬಾಲಕೃಷ್ಣ ನಾಯಿಕ, ಆಸೀಫ್ ಭಾಗವಾನ, ರಿಜ್ವಾನ ಭಾಗವಾನ, ಸರ್ಫರಾಜ ಕಿಲ್ಲೇದಾರ ಹಾಗೂ ಸಯ್ಯದ ಯೂಸುಫ್ ಇನಾಮದಾರ ಬಂಧಿಸಲಾಗಿದೆ. ಇದೇ ವೇಳೆ ಆರೋಪಿ ಸಚಿನ್ ಶಿಂಧೆ ದಾಳಿ ವೇಳೆ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
