Monday, November 23, 2026
HomeBelagaviಬೆಳಗಾವಿ ಕಾಂಗ್ರೆಸ್ ಗೆ ಹೊಸ ಸಾರಥಿಗಳು

ಬೆಳಗಾವಿ ಕಾಂಗ್ರೆಸ್ ಗೆ ಹೊಸ ಸಾರಥಿಗಳು

ಬೆಳಗಾವಿ

ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ ನಡೆದಿದ್ದು, ಪಕ್ಷದ ಗ್ರಾಮೀಣ ಹಾಗೂ ನಗರ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷರಾಗಿ ಬಸವರಾಜ ಶೇಗಾವಿ ಹಾಗೂ ನಗರ ಘಟಕದ ಅಧ್ಯಕ್ಷರಾಗಿ ರಾಜಾ ಸಲೀಂ ಅವರನ್ನು ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ.
ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ನೇಮಕಾತಿ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಸಂಘಟನೆಗೆ ಚುರುಕು ನೀಡುವ ಜವಾಬ್ದಾರಿ ಬಸವರಾಜ ಶೇಗಾವಿ ಅವರ ಹೆಗಲಿಗೆ ಬಂದಿದ್ದರೆ, ಬೆಳಗಾವಿ ನಗರದಲ್ಲಿ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವ ಹೊಣೆಗಾರಿಕೆ ರಾಜಾ ಸಲೀಂ ಅವರಿಗೆ ವಹಿಸಲಾಗಿದೆ.

Total Views 216
RELATED ARTICLES

Most Popular

Recent Comments

KNN City News
Home
E-Paper