Monday, November 23, 2026
HomeBelagaviಇಎಸ್‌ಎ 7ನೇ ಕರಡು ಅಧಿಸೂಚನೆ ಜಾರಿಗೆ ಆಗ್ರಹ

ಇಎಸ್‌ಎ 7ನೇ ಕರಡು ಅಧಿಸೂಚನೆ ಜಾರಿಗೆ ಆಗ್ರಹ

 

ಶಿವಮೊಗ್ಗ
ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ)ದ 7ನೇ ಕರಡು ಅಧಿಸೂಚನೆ ಜಾರಿಗೆ ಸೇರಿದಂತೆ ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಕುರಿತು ಸೆ.6ರಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಅಂತರರಾಜ್ಯ ಸಾರ್ವಜನಿಕ ಸಭೆ ನಡೆಯಿತು.
ಚಾತುರ್ಮಾಸ್ಯ ಕಾರ್ಯಕ್ರಮದ ಅಂಗವಾಗಿ, ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಸೆಲೆಕ್ಟ್ ಫೌಂಡೇಶನ್ ಅಧ್ಯಕ್ಷ ಪೂಜ್ಯ ಶ್ರೀ ಮಾರುತಿ ಗುರೂಜಿ ಅವರ ಕರೆಯ ಮೇರೆಗೆ ಸಭೆ ಆಯೋಜಿಸಲಾಗಿತ್ತು. ಮಾಜಿ ಶಾಸಕ ಮಹಿಮಾ ಪಟೇಲ್ ಹಾಗೂ ವಚನ ಟಿವಿ ಸಂಸ್ಥಾಪಕ ಪ್ರೊ. ಸಿದ್ದು ಯಾಪಲಪರ್ವಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಪಶ್ಚಿಮ ಘಟ್ಟ ವ್ಯಾಪ್ತಿಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ರೈತರು, ರೈತ ಮುಖಂಡರು, ಪಂಚಾಯಿತಿ ಸದಸ್ಯರು, ರಾಜಕೀಯ ಮುಖಂಡರು, ಹೋರಾಟಗಾರರು, ಸಾಮಾಜಿಕ ಪ್ರಭಾವಿಗಳು ಹಾಗೂ ಧಾರ್ಮಿಕ ಮುಖಂಡರು ಸಭೆಯಲ್ಲಿ ಭಾಗವಹಿಸಿ ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು ಚರ್ಚಿಸಿದರು.
ಪಶ್ಚಿಮ ಘಟ್ಟಕ್ಕೆ ಪೂರ್ಣ ಪ್ರಮಾಣದ ಕಾನೂನಾತ್ಮಕ ರಕ್ಷಣೆಯನ್ನು ಒದಗಿಸುವುದು ಹಾಗೂ ಪರಿಸರ ಸಂರಕ್ಷಣೆಯೊಂದಿಗೆ ಸ್ಥಳೀಯ ಜನರ ಹಿತಾಸಕ್ತಿಯನ್ನು ಕಾಪಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸರ್ಕಾರದ ಮುಂದೆ ಮಂಡಿಸಬೇಕಾದ ಬೇಡಿಕೆಗಳ ಕುರಿತು ಒಮ್ಮತದ ನಿರ್ಣಯ ಕೈಗೊಂಡು, ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಯಿತು.
ಈ ಹಿನ್ನೆಲೆಯಲ್ಲಿ ಮಾರುತಿ ಗುರೂಜಿ ಅವರ ನೇತೃತ್ವದಲ್ಲಿ ‘ಪಶ್ಚಿಮ ಘಟ್ಟ ಸಂರಕ್ಷಣಾ ಅಂತರರಾಜ್ಯ ವೇದಿಕೆ’ ರಚಿಸಲಾಯಿತು. ವೇದಿಕೆಯ ವತಿಯಿಂದ ಸೆ.6ರಂದು ಅಂಗೀಕರಿಸಿದ ನಿರ್ಣಯವನ್ನು ಶಿವಮೊಗ್ಗದ ಅಖಿಲೇಶ್ ಚಿಪ್ಳಿ ಅವರು ಸೆ.8ರಂದು ಬೆಂಗಳೂರಿನಲ್ಲಿ ಅರಣ್ಯ ಸಚಿವರಿಗೆ ಸಲ್ಲಿಸಿದರು.
7ನೇ ಕರಡು ಅಧಿಸೂಚನೆಯಲ್ಲಿನ ಇಎಸ್‌ಎ ವ್ಯಾಪ್ತಿಯನ್ನು ಕೂಡಲೇ ಜಾರಿಗೊಳಿಸುವುದು, ಮಹದಾಯಿ, ಕಾಳಿ, ಅಘನಾಶಿನಿ, ನೇತ್ರಾವತಿ, ಪುನ್ನಪುಳ ಹಾಗೂ ನಲ್ಲಾರ್ ನದಿಗಳಿಗೆ ಸಂಬಂಧಿಸಿದ ನದಿ ತಿರುವು ಯೋಜನೆಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಪ್ರಮುಖ ಬೇಡಿಕೆಗಳಾಗಿವೆ.
ಅಲ್ಲದೆ, ಶರಾವತಿ, ಕಾಳಿ, ಕೊಲ್ಲೂರು, ಚಕ್ರಾ, ವಾರಾಹಿ, ಸೀತಾ, ಮಾನ್‌ಹೋಲ್, ಹುಲಗಿ ಹಾಗೂ ಕಾವೇರಿ ನದಿ ವ್ಯವಸ್ಥೆಗಳಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಗಳಿಗೆ ನಿಷೇಧ ವಿಧಿಸಬೇಕು. 2018ರ ಧಾರಣಾ ಸಾಮರ್ಥ್ಯ (ಕ್ಯಾರಿಯಿಂಗ್ ಕೆಪಾಸಿಟಿ) ವರದಿಯನ್ನು ಸಾರ್ವಜನಿಕಗೊಳಿಸಿ, ಅದರ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

 

Total Views 7
RELATED ARTICLES

Most Popular

Recent Comments

KNN City News
Home
E-Paper