
ಬೆಳಗಾವಿ
ವಂದೇ ಮಾತರಂ’ ಗೀತೆಯನ್ನು ಎರಡು ಚರಣಗಳಿಗಷ್ಟೇ ಸ್ಥಗೀತಗೊಳ್ಳಿಸಿದ್ದಕ್ಕೆ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಪೂರ್ಣ ಹಾಡು ಹಾಕುವಂತೆ ಸೂಚಿಸಿದ ಘಟನೆ ನಡೆದಿದೆ.
ಗುರುವಾರ ಬಿಮ್ದ್ ಆಡಿಟೋರಿಯಂನಲ್ಲಿ ವಿಕಲಚೇತನ ಕಲ್ಯಾಣ ಇಲಾಖೆಯಿಂದ ಅಂಗವಿಕಲರಿಗೆ ಸಲಕರಣೆಗಳ ವಿತರಣೆ ಸಮಾರಂಭದಲ್ಲಿ ನಡೆಯಿತು. ವಂದೇ ಮಾತರಂ ಎಲ್ಲಾ ಆರು ಚರಣಗಳನ್ನು ಹಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ವಿವಾದ ಉಂಟಾಗಿತ್ತು. ಇಂದು ನಡೆದ ಕಾರ್ಯಕ್ರಮದಲ್ಲಿ ಎರಡು ಚರಣಗಳಿಗೆ ಹಾಡಿದ ವಂದೇ ಮಾದರಂ ಗೀತೆಯನ್ನು ಪೂರ್ಣ ಹಾಕುವಂತೆ ಶೆಟ್ಟರ್ ಸೂಚಿಸಿದ ಬಳಿಕ ಪೂರ್ಣ ಹಾಡು ಹುಡುಲು ಬಿಮ್ಸ್ ಸಿಬ್ಬಂದಿ ಮೊಬೈಲ್ ಹಿಡಿದು ಕೆಲ ಸಮಯದ ಬಳಿಕ ಪೂರ್ಣ ಹಾಡು ಹಾಕಲಾಯಿತು.
ಉಪಮೇಯರ್ ಹಣಮಂತ ಕೊಂಗಾಲಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ್ ಪಾಟೀಲ್, ನಗರ ಘಟಕ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಸಂಸದೆ ಮಂಗಲ್ ಅಂಗಡಿ, ಮಾಜಿ ಶಾಸಕ ಸಂಜಯ ಪಾಟೀಲ್, ಮಾಜಿ ವಿಧಾನ ಪರಿಷತ್ತಿನ ಸದಸ್ಯ ಮಹಾಂತೇಶ ಕವಟಗಿಮಠ, ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೋಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
